ADVERTISEMENT

ಪ್ಯಾರಿಸ್: ಅಧಿಕೃತವಾಗಿ ತೆರೆದ ಕ್ರೀಡಾ‌ಗ್ರಾಮ

​ಪ್ರಜಾವಾಣಿ ವಾರ್ತೆ
Published 18 ಜುಲೈ 2024, 15:51 IST
Last Updated 18 ಜುಲೈ 2024, 15:51 IST
ಪ್ಯಾರಿಸ್‌ನಲ್ಲಿ ತೆರೆಯಲಾದ ಕ್ರೀಡಾಗ್ರಾಮದ ಪ್ರವೇಶದ್ವಾರ –ಎಎಫ್‌ಪಿ ಚಿತ್ರ
ಪ್ಯಾರಿಸ್‌ನಲ್ಲಿ ತೆರೆಯಲಾದ ಕ್ರೀಡಾಗ್ರಾಮದ ಪ್ರವೇಶದ್ವಾರ –ಎಎಫ್‌ಪಿ ಚಿತ್ರ   

ಪ್ಯಾರಿಸ್‌: ಪ್ಯಾರಿಸ್ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್‌ಗಾಗಿ ಕ್ರೀಡಾಗ್ರಾಮವನ್ನು ಗುರುವಾರ ಅಧಿಕೃತವಾಗಿ ತೆರೆಯಲಾಯಿತು.

ಪ್ಯಾರಿಸ್‌ ಉತ್ತರ ಭಾಗದಲ್ಲಿರುವ ಕ್ರೀಡಾಗ್ರಾಮವು 9 ಸಾವಿರ ಕ್ರೀಡಾಪಟುಗಳು ಸೇರಿದಂತೆ ಸುಮಾರು 14,500 ಮಂದಿಗೆ ವಸತಿ ವ್ಯವಸ್ಥೆ ಕಲ್ಪಿಸುವಷ್ಟು ಸಾಮರ್ಥ್ಯವನ್ನು ಹೊಂದಿದೆ.

ಒಲಿಂಪಿಕ್ಸ್‌ ಉದ್ಘಾಟನಾ ಸಮಾರಂಭಕ್ಕೆ ಎಂಟು ದಿನ ಬಾಕಿ ಉಳಿದಿದ್ದು, ಈಗಾಗಲೇ ಆಸ್ಟ್ರೇಲಿಯಾ ಮತ್ತು ಬ್ರೆಜಿಲ್‌ನಿಂದ ಬಂದ ಮೊದಲ ತಂಡದ ಸದಸ್ಯರನ್ನು ಕ್ರೀಡಾಗ್ರಾಮಕ್ಕೆ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.

ADVERTISEMENT

‘ನಾವು ಸಿದ್ಧರಾಗಿದ್ದೇವೆ’ ಎಂದು ಕ್ರೀಡಾಗ್ರಾಮದ ಉಪ ಮುಖ್ಯಸ್ಥ ಆಗಸ್ಟಿನ್ ಟ್ರಾನ್ ವ್ಯಾನ್ ಚೌ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಜುಲೈ 26ರಿಂದ ಮತ್ತು ಸೆಪ್ಟೆಂಬರ್ 8ರ ನಡುವೆ ಒಲಿಂಪಿಯನ್‌ಗಳು ಮತ್ತು ಪ್ಯಾರಾಲಿಂಪಿಯನ್‌ಗಳು ಬಳಸಿದ ನಂತರ ಕ್ರೀಡಾಗ್ರಾಮದಲ್ಲಿರುವ ಅಪಾರ್ಟ್‌ಮೆಂಟ್‌ಗಳನ್ನು ಮನೆಗಳಾಗಿ ಪರಿವರ್ತಿಸಲಾಗುತ್ತದೆ. ಕನಿಷ್ಠ ಮೂರನೇ ಒಂದು ಭಾಗವನ್ನು ಸಾರ್ವಜನಿಕ ವಸತಿಗಾಗಿ ಉದ್ದೇಶಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.