ADVERTISEMENT

ಏಷ್ಯನ್ ಜೂನಿಯರ್ ಟೇಬಲ್ ಟೆನಿಸ್ ಟೂರ್ನಿ: ಯಶಸ್ವಿನಿ–ಪಾಯಸ್‌ಗೆ ಚಿನ್ನ

ಪಿಟಿಐ
Published 6 ಸೆಪ್ಟೆಂಬರ್ 2022, 12:32 IST
Last Updated 6 ಸೆಪ್ಟೆಂಬರ್ 2022, 12:32 IST
ಯಶಸ್ವಿನಿ ಘೋರ್ಪಡೆ ಮತ್ತು ಪಾಯಸ್‌ ಜೈನ್‌
ಯಶಸ್ವಿನಿ ಘೋರ್ಪಡೆ ಮತ್ತು ಪಾಯಸ್‌ ಜೈನ್‌   

ನವದೆಹಲಿ: ಭಾರತದ ಯಶಸ್ವಿನಿ ಘೋರ್ಪಡೆ ಮತ್ತು ಪಾಯಸ್‌ ಜೈನ್ ಜೋಡಿಯು ಏಷ್ಯನ್‌ ಜೂನಿಯರ್ ಟೇಬಲ್ ಟೆನಿಸ್ ಟೂರ್ನಿಯ ಮಿಶ್ರ ಡಬಲ್ಸ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.

ಲಾವೊಸ್‌ನಲ್ಲಿ ನಡೆದ ಚಾಂಪಿಯನ್‌ಷಿಪ್‌ನ ಫೈನಲ್‌ ಹಣಾಹಣಿಯಲ್ಲಿ ಕರ್ನಾಟಕದ ಯಶಸ್ವಿನಿ ಮತ್ತು ಪಾಯಸ್‌11-9, 11-1, 10-12, 7-11, 11-8ರಿಂದ ಚೀನಾದ ಹ್ಯಾನ್‌ ಜಿನ್ಯುನ್‌ ಮತ್ತು ಕಿನ್‌ ಯುಕ್ಸುವಾನ್ ಅವರನ್ನು ಪರಾಭವಗೊಳಿಸಿದರು.

ಏಷ್ಯನ್ ಚಾಂಪಿಯನ್‌ಷಿಪ್‌ನ ಜೂನಿಯರ್‌ ವಿಭಾಗದಲ್ಲಿ ಭಾರತಕ್ಕೆ ಒಲಿದ ಮೊದಲ ಚಿನ್ನದ ಪದಕ ಇದು. ಬರ್ಮಿಂಗ್‌ಹ್ಯಾಮ್‌ನಲ್ಲಿ ಕಳೆದ ತಿಂಗಳು ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಶರತ್ ಕಮಲ್ ಮತ್ತು ಶ್ರೀಜಾ ಅಕುಲಾ ಜೋಡಿಯು ಚಾಂಪಿಯನ್ ಆಗಿತ್ತು.

ADVERTISEMENT

ಯಶಸ್ವಿನಿ 19 ವರ್ಷದೊಳಗಿನ ಬಾಲಕಿಯರ ಸಿಂಗಲ್ಸ್ ವಿಭಾಗದಲ್ಲೂ ಸೆಮಿಫೈನಲ್‌ವರೆಗೆ ತಲುಪಿದ್ದರು.

ಏಷ್ಯನ್ ಜೂನಿಯರ್ ಚಾಂಪಿಯನ್‌ಷಿಪ್‌ನಲ್ಲಿ ಮೂರು ಕಂಚಿನ ಪದಕಗಳೂ ಭಾರತದ ಮಡಿಲು ಸೇರಿದವು. 19 ವರ್ಷದೊಳಗಿನ ಬಾಲಕರ ಡಬಲ್ಸ್‌, ಬಾಲಕರ ತಂಡ ವಿಭಾಗ ಮತ್ತು ಬಾಲಕಿಯರ ಸಿಂಗಲ್ಸ್ ವಿಭಾಗದಲ್ಲಿ ಈ ಪದಕಗಳು ಬಂದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.