ADVERTISEMENT

ಬೆಂಗಳೂರು: 18ಕ್ಕೆ ಸಹಾಯಾರ್ಥ ಪಿಕಲ್‌ಬಾಲ್‌ ಟೂರ್ನಿ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2025, 16:09 IST
Last Updated 14 ಅಕ್ಟೋಬರ್ 2025, 16:09 IST
ಪಿಕಲ್‌ಬಾಲ್‌ ಆಟದ ಗಮ್ಮತ್ತು...  ಚಿತ್ರಗಳು:ಕೃಷ್ಣ ಕುಮಾರ್‌ ಪಿ.ಎಸ್.
ಪಿಕಲ್‌ಬಾಲ್‌ ಆಟದ ಗಮ್ಮತ್ತು...  ಚಿತ್ರಗಳು:ಕೃಷ್ಣ ಕುಮಾರ್‌ ಪಿ.ಎಸ್.   

ಬೆಂಗಳೂರು: ದುರ್ಬಲ ಸಮುದಾಯಗಳಿಗೆ ಸೇರಿದ ಮಹಿಳಾ ಉದ್ಯಮಿಗಳಿಗೆ ಸೌರದೀಪಗಳನ್ನು ನೀಡುವ ‘ಬಿ ಪೊಲೈಟ್’ ಯೋಜನೆಗೆ ದೇಣಿಗೆ ಸಂಗ್ರಹಿಸಲು ಇದೇ 18ರಂದು ಜಯಮಹಲ್‌ನ  ಗೋ ರ‍್ಯಾಲಿಯ ಡಿಪೊ–18ರಲ್ಲಿ ಪಿಕಲ್‌ ಬಾಲ್‌ ಟೂರ್ನಿ ಏರ್ಪಡಿಸಲಾಗಿದೆ.

ಆಕರ್ಷ್‌ ಶಾಮನೂರು ಅವರ ಕನಸಿನ ಈ ಯೋಜನೆಯಡಿ ಬೀದಿಬದಿ ವ್ಯಾಪಾರ ನಡೆಸುವ ಮಹಿಳೆಯರಿಗೆ ಕೊಡೆಯ ಸಹಿತ ಸೌರಶಕ್ತಿ ಆಧಾರಿತ ದೀಪಗಳನ್ನು ನೀಡಲಾಗುವುದು. ಇದರಲ್ಲಿ ಮೊಬೈಲ್‌ ಚಾರ್ಜಿಂಗ್‌ ವ್ಯವಸ್ಥೆಯೂ ಇರಲಿದೆ. ಇದನ್ನು ಆಕರ್ಷ್ ಅವರೇ  ವಿನ್ಯಾಸಗೊಳಿಸಿದ್ದಾರೆ.

ಸೌರ ಮಂಡಲ ಫೌಂಡೇಷನ್ ಸಹಯೋಗದೊಂದಿಗೆ ಹಮ್ಮಿಕೊಂಡಿರುವ ಪಿಕಲ್‌ಬಾಲ್ ಟೂರ್ನಿಯು ಬೆಳಿಗ್ಗೆ 11 ರಿಂದ ಸಂಜೆ 4 ಗಂಟೆಯವರೆಗೆ ನಡೆಯಲಿದೆ. ಇದರಿಂದ ಬರುವ ಹಣದಲ್ಲಿ ಮೇಘಾಲಯದಲ್ಲಿ ಬೀದಿಬದಿಯಲ್ಲಿ ವ್ಯಾಪಾರ ನಡೆಸುವ ನೂರಕ್ಕೂ ಹೆಚ್ಚು ಮಹಿಳೆಯರಿಗೆ ಸೌರದೀಪಗಳನ್ನು ನೀಡಿ ಅವರ ಕಾರ್ಯಕ್ಷೇತ್ರದಲ್ಲಿ ಸುಧಾರಣೆಗೆ ನೆರವಾಗುವ ವಿಶ್ವಾಸ ಹೊಂದಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ನೋಂದಾಯಿಸಲು ಸೆಂಥುರ್‌ ಕೃತಿಕ್‌ ಅವರನ್ನು (9591928188) ಸಂಪರ್ಕಿಸಬಹುದು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.