ADVERTISEMENT

ಚಳಿಗಾಲದ ಕ್ರೀಡಾ ಕೇಂದ್ರವಾಗಲಿದೆ ಕಾಶ್ಮೀರ: ಪ್ರಧಾನಿ ಮೋದಿ

ಖೇಲೋ ಇಂಡಿಯಾ ವಿಂಟರ್‌ ಗೇಮ್ಸ್‌’ಗೆ ಚಾಲನೆ

ಪಿಟಿಐ
Published 26 ಫೆಬ್ರುವರಿ 2021, 8:29 IST
Last Updated 26 ಫೆಬ್ರುವರಿ 2021, 8:29 IST
ಪ್ರಧಾನಿ ಮೋದಿ (ಪಿಟಿಐ ಚಿತ್ರ)
ಪ್ರಧಾನಿ ಮೋದಿ (ಪಿಟಿಐ ಚಿತ್ರ)   

ನವದೆಹಲಿ: ಜಮ್ಮು ಮತ್ತು ಕಾಶ್ಮೀರವು ದೇಶದ ಚಳಿಗಾಲದ ಕ್ರೀಡಾ ಕೇಂದ್ರವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಗುಲ್‌ಮಾರ್ಗ್‌ನಲ್ಲಿ ಎರಡನೇ ‘ಖೇಲೋ ಇಂಡಿಯಾ ವಿಂಟರ್‌ ಗೇಮ್ಸ್‌’ ಅನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ‘ಈ ಕಾರ್ಯಕ್ರಮವು ಜಮ್ಮು ಮತ್ತು ಕಾಶ್ಮೀರವನ್ನು ದೇಶದ ಚಳಿಗಾಲದ ಕ್ರೀಡೆಗಳ ಕೇಂದ್ರವನ್ನಾಗಿ ಮಾಡುವ ಹೆಜ್ಜೆಯಾಗಿದೆ’ ಎಂದು ಹೇಳಿದ್ದಾರೆ.

27 ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಅಥ್ಲೀಟ್‌ಗಳು ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿದ್ದಾರೆ. ಮಾರ್ಚ್ 2ರ ವರೆಗೆ ಕ್ರೀಡಾಕೂಟ ನಡೆಯಲಿದೆ.

ADVERTISEMENT

‘ಇದು ಅಂತರರಾಷ್ಟ್ರೀಯ ಚಳಿಗಾಲದ ಆಟಗಳ ರಂಗದಲ್ಲಿ ಭಾರತದ ಉಪಸ್ಥಿತಿಯನ್ನು ತೋರ್ಪಡಿಸುವ ಹಂತವಾಗಿದೆ. ಈ ಕ್ರೀಡಾಕೂಟಗಳು ‘ಏಕ್ ಭಾರತ್, ಶ್ರೇಷ್ಠ ಭಾರತ್' ಸಂಕಲ್ಪವನ್ನು ಬಲಪಡಿಸುತ್ತವೆ’ ಎಂದು ಮೋದಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.