ADVERTISEMENT

Paralympics: ಭಾವಿನಾಗೆ ಪ್ರಧಾನಿ, ರಾಷ್ಟ್ರಪತಿ ಸೇರಿ ಗಣ್ಯರ ಅಭಿನಂದನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಆಗಸ್ಟ್ 2021, 6:50 IST
Last Updated 29 ಆಗಸ್ಟ್ 2021, 6:50 IST
ಭಾವಿನಾ ಪಟೇಲ್‌ (ಪಿಟಿಐ ಚಿತ್ರ)
ಭಾವಿನಾ ಪಟೇಲ್‌ (ಪಿಟಿಐ ಚಿತ್ರ)   

ನವದೆಹಲಿ: ಟೋಕಿಯೊ ಪ್ಯಾರಾಲಿಂಪಿಕ್ಸ್‌ನ ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿರುವ ಭಾವಿನಾ ಪಟೇಲ್‌ಗೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸೇರಿದಂತೆ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.

‘ಭಾವಿನಾ ಪಟೇಲ್‌ ಇತಿಹಾಸ ರಚಿಸಿದ್ದಾರೆ. ಅವರು ಐತಿಹಾಸಿಕ ಬೆಳ್ಳಿ ಪದಕವನ್ನು ಭಾರತಕ್ಕೆ ತಂದುಕೊಟ್ಟಿದ್ದಾರೆ. ಅಭಿನಂದನೆಗಳು. ಅವರ ಜೀವನ ಪಯಣವು ಸ್ಫೂರ್ತಿದಾಯಕವಾಗಿದ್ದು, ಯುವ ಜನರನ್ನು ಕ್ರೀಡೆಯತ್ತ ಸೆಳೆಯಲಿದೆ’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ADVERTISEMENT

‘ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾವಿನಾ ಪಟೇಲ್‌ ಅವರು ಭಾರತದ ಕ್ರೀಡಾಪ್ರಿಯರಿಗೆ ಸ್ಫೂರ್ತಿದಾಯಕರಾಗಿ ಪರಿಣಮಿಸಿದ್ದಾರೆ. ನಿಮ್ಮ (ಭಾವಿನಾ) ಅಸಾಧಾರಣ ದೃಢತೆ ಮತ್ತು ಕೌಶಲ ಭಾರತಕ್ಕೆ ಕೀರ್ತಿ ತಂದಿವೆ. ಈ ಅಸಾಧಾರಣ ಸಾಧನೆಗಾಗಿ ನಿಮಗೆ ಅಭಿನಂದನೆಗಳು’ ಎಂದು ಕೋವಿಂದ್ ಟ್ವೀಟ್ ಮಾಡಿದ್ದಾರೆ.

ಮಾಜಿ ಕ್ರಿಕೆಟಿಗರಾದ ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್ ಸೇರಿದಂತೆ ಅನೇಕರು ಭಾವಿನಾ ಅವರನ್ನು ಅಭಿನಂದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.