ಹಾಂಗ್‌ಝೌ: ಭಾರತದ ಪ್ರಣತಿ ನಾಯಕ್ ಸೋಮವಾರ ಇಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ ಜಿಮ್ನಾಸ್ಟಿಕ್ಸ್‌ನ ವಾಲ್ಟ್ ಮತ್ತು ಆಲ್‌ರೌಂಡ್ ಸ್ಪರ್ಧೆಗಳಲ್ಲಿ ಫೈನಲ್‌ಗೆ ಅರ್ಹತೆ ಪಡೆದರು.
ಪ್ರಣತಿ ಅವರು ಮಹಿಳೆಯರ ವಾಲ್ಟ್ ಸ್ಪರ್ಧೆಯಲ್ಲಿ ಒಟ್ಟು 12.716 ಅಂಕ ಗಳಿಸಿ, ಅಗ್ರ ಎಂಟು ಅರ್ಹತಾ ಆಟಗಾರರಲ್ಲಿ ಆರನೇ ಸ್ಥಾನ ಪಡೆದರು.
ಜತೆಗೆ ಬುಧವಾರ ನಡೆಯಲಿರುವ ಮಹಿಳೆಯರ ಆಲ್‌ರೌಂಡ್ ಫೈನಲ್‌ನಲ್ಲಿ ಸ್ಪರ್ಧಿಸಲು ಆಯ್ಕೆಯಾದ 18 ಸ್ಪರ್ಧಿಗಳಲ್ಲಿ ಅವರು ಸ್ಥಾನವನ್ನು ಪಡೆದಿದ್ದಾರೆ.
ಆಲ್ ರೌಂಡ್ ಸ್ಪರ್ಧೆಯಲ್ಲಿ ಒಟ್ಟಾರೆಯಾಗಿ 23ನೇ ಸ್ಥಾನವನ್ನು ಅವರು ಪಡೆದರು. ಆದರೆ, ಫೈನಲ್‌ನಲ್ಲಿ ಒಂದು ದೇಶವು ಗರಿಷ್ಠ ಇಬ್ಬರು ಜಿಮ್ನಾಸ್ಟ್‌ಗಳನ್ನು ಮಾತ್ರ ಹೊಂದಬಹುದು ಎಂಬ ನಿಯಮದಿಂದಾಗಿ ಅರ್ಹತೆ ಪಡೆದರು. ಚೀನಾ, ಜಪಾನ್, ಚೀನಾ ತೈಪೆ, ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾ ತಲಾ ಮೂರು ಜಿಮ್ನಾಸ್ಟ್‌ಗಳನ್ನು ಹೊಂದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.