ADVERTISEMENT

ಹೀರೊ ಮಹಿಳಾ ಪ್ರೊ ಗಾಲ್ಫ್‌ ಟೂರ್‌: ಕರ್ನಾಟಕದ ಪ್ರಣವಿಗೆ ಪ್ರಶಸ್ತಿ

ಪಿಟಿಐ
Published 20 ಜನವರಿ 2023, 18:12 IST
Last Updated 20 ಜನವರಿ 2023, 18:12 IST
ಪ್ರಣವಿ ಅರಸ್
ಪ್ರಣವಿ ಅರಸ್   

ಮುಂಬೈ: ಕರ್ನಾಟಕದ ಪ್ರಣವಿ ಅರಸ್‌ ಅವರು ಇಲ್ಲಿ ಕೊನೆಗೊಂಡ ಹೀರೊ ಮಹಿಳಾ ಪ್ರೊ ಗಾಲ್ಫ್‌ ಟೂರ್‌ ಎರಡನೇ ಲೆಗ್‌ನ ಟೂರ್ನಿಯಲ್ಲಿ ಚಾಂಪಿಯನ್‌ ಆದರು.

ಶುಕ್ರವಾರ ನಡೆದ ಕೊನೆಯ ಸುತ್ತಿನ ಸ್ಪರ್ಧೆಯನ್ನು ಅವರು 70 ಸ್ಟ್ರೋಕ್‌ಗಳೊಂದಿಗೆ ಕೊನೆಗೊಳಿಸಿದರು. ಮೈಸೂರಿನ ಗಾಲ್ಫರ್‌ ಮೂರು ದಿನಗಳಲ್ಲಿ ಒಟ್ಟು 210 ಸ್ಕೋರ್‌ ಮಾಡಿದರು.

ವಾಣಿ ಕಪೂರ್‌ (215) ಎರಡನೇ ಸ್ಥಾನ ಗಳಿಸಿದರು. ತಲಾ 218 ಸ್ಕೋರ್‌ ಮಾಡಿದ ಸ್ನೇಹಾ ಸಿಂಗ್, ಅಮನ್‌ದೀಪ್‌ ದ್ರಾಲ್, ನಿಶ್ನಾ ಪಟೇಲ್‌ ಮತ್ತು ಅಫ್ಶಾನ್‌ ಫಾತಿಮಾ ಅವರು ಜಂಟಿ ಮೂರನೇ ಸ್ಥಾನದಲ್ಲಿ ಕಾಣಿಸಿಕೊಂಡರು.

ADVERTISEMENT

ಎರಡನೇ ಸುತ್ತಿನ ಬಳಿಕ 142 ಸ್ಕೋರ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದ ಅಫ್ಶಾನಾ, ಅಂತಿಮ ಸುತ್ತಿನಲ್ಲಿ (76) ಲಯ ಕಂಡುಕೊಳ್ಳಲು ವಿಫಲರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.