ADVERTISEMENT

ಅಂತರರಾಜ್ಯ ಅಥ್ಲೆಟಿಕ್ಸ್‌: ಪ್ರಿಯಾಗೆ ಚಿನ್ನ, ಪೂವಮ್ಮಗೆ ಬೆಳ್ಳಿ

ಪಿಟಿಐ
Published 28 ಜೂನ್ 2021, 19:00 IST
Last Updated 28 ಜೂನ್ 2021, 19:00 IST
ಪ್ರಿಯಾ ಮೋಹನ್ –ಪ್ರಜಾವಾಣಿ ಸಂಗ್ರಹ ಚಿತ್ರ
ಪ್ರಿಯಾ ಮೋಹನ್ –ಪ್ರಜಾವಾಣಿ ಸಂಗ್ರಹ ಚಿತ್ರ   

ಪಟಿಯಾಲ: ಮಿಂಚಿನ ಓಟದ ಮೂಲಕ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿದ ಕರ್ನಾಟಕದ ಪ್ರಿಯಾ ಮೋಹನ್‌ ಮತ್ತು ಎಂ.ಆರ್‌.ಪೂವಮ್ಮ ಇಲ್ಲಿ ನಡೆಯುತ್ತಿರುವ ಅಂತರರಾಜ್ಯ ಅಥ್ಲೆಟಿಕ್ ಕೂಟದಲ್ಲಿ ಸೋಮವಾರ ಪದಕಗಳನ್ನು ಗೆದ್ದುಕೊಂಡರು. 400 ಮೀಟರ್ಸ್ ಓಟದ ಸ್ಪರ್ಧೆಯಲ್ಲಿ ಪ್ರಿಯಾ ಚಿನ್ನಕ್ಕೆ ಮುತ್ತಿಕ್ಕಿದರೆ ಪೂವಮ್ಮ ಬೆಳ್ಳಿ ಪದಕ ಗೆದ್ದುಕೊಂಡರು.

ಲೇನ್ ಮೂರರಲ್ಲಿ ಓಡಿದ ಯುವ ಅಥ್ಲೀಟ್‌ ಪ್ರಿಯಾಗೆ ತಮ್ಮದೇ ರಾಜ್ಯದ ಪೂವಮ್ಮ ಮಾತ್ರವಲ್ಲದೆ ಕೇರಳದ ಜಿಶ್ನಾ ಮ್ಯಾಥ್ಯೂ, ತಮಿಳುನಾಡಿನ ರೇವತಿ ವೀರಮಣಿ ಮತ್ತು ಹರಿಯಾಣದ ರಚನಾ ಅವರಿಂದ ತೀವ್ರ ಪೈಪೋಟಿ ಎದುರಾಗಿತ್ತು. ಕೊನೆಯ 200 ಮೀಟರ್ಸ್‌ನಲ್ಲಿ ಪ್ರಿಯಾ ವೇಗ ಹೆಚ್ಚಿಸಿಕೊಂಡರು. 53.29 ಸೆಕೆಂಡುಗಳಲ್ಲಿ ಅವರು ಗುರಿ ಮುಟ್ಟಿದರೆ ಪೂವಮ್ಮ ಅಂತಿಮ ಗೆರೆ ದಾಟಲು 53.54 ಸೆಕೆಂಡು ತೆಗೆದುಕೊಂಡರು.

ತಜಿಂದರ್‌ಗೆ ಚಿನ್ನದ ಪದಕ
ಒಲಿಂಪಿಕ್ಸ್‌ಗೆ ಆಯ್ಕೆಯಾಗಿರುವ ತಜಿಂದರ್ ಪಾಲ್ ತೂರ್ ಶಾಟ್‌ಪಟ್‌ನಲ್ಲಿ ಚಿನ್ನ ಗೆದ್ದರು. ಮಹಿಳೆಯರ ಜಾವೆಲಿನ್ ಥ್ರೋದಲ್ಲಿ ರಾಷ್ಟ್ರೀಯ ದಾಖಲೆ ಹೊಂದಿರುವ ಅನು ರಾಣಿ ಚಿನ್ನ ಗೆದ್ದರೂ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಲು ವಿಫಲರಾದರು.

ADVERTISEMENT

ಫಲಿತಾಂಶಗಳು
ಪುರುಷರ 400 ಮೀಟರ್ಸ್ ಓಟ: ಕಳಿಗ ಕುಮಾರಗೆ (ಶ್ರೀಲಂಕಾ)–1. ಕಾಲ: 45.73ಸೆಕೆಂಡು, ವಿಕ್ರಾಂತ್ ಪಾಂಚಾಲ್ (ಹರಿಯಾಣ)–2, ಸಾರ್ಥಕ್ ಭಾಂಬ್ರಿ (ದೆಹಲಿ)–3
1500 ಮೀ ಓಟ: ಅಜಯ್‌ ಕುಮರ್ ಸರೋಜ್ (ಉತ್ತರ ಪ್ರದೇಶ)–1. ಕಾಲ: 3 ನಿಮಿಷ 42.55, ಶಶಿಭೂಷಣ್ ಸಿಂಗ್ (ಪಶ್ಚಿಮ ಬಂಗಾಳ)–2, ರಾಹುಲ್ (ದೆಹಲಿ)–3;
ಲಾಂಗ್‌ಜಂಪ್‌: ಮುಹಮ್ಮದ್ ಅನೀಶ್ (ಕೇರಳ)–1. 7.76 ಮೀಟರ್ಸ್‌, ಯುಗಾಂತ್ ಶೇಖರ್ ಸಿಂಗ್ (ಉತ್ತರ ಪ್ರದೇಶ)–2, ರಿಷಭ್ (ಉತ್ತರಪ್ರದೇಶ)–3
ಶಾಟ್‌ಪಟ್: ತಜಿಂದರ್ ಸಿಂಗ್ ತೂರ್ (ಪಂಜಾಬ್)–1. ಅಂತರ:21.10 ಮೀ, ಕರವೀರ್ ಸಿಂಗ್ (ಪಂಜಾಬ್)–2, ವನಂ ಶರ್ಮಾ (ರಾಜಸ್ತಾನ್)–3.

ಮಹಿಳೆಯರ 400 ಮೀಟರ್ಸ್ ಓಟ: ಪ್ರಿಯಾ ಮೋಹನ್ (ಕರ್ನಾಟಕ)–1. ಕಾಲ: 53.29 ಸೆ, ಎಂ.ಆರ್.ಪೂವಮ್ಮ (ಕರ್ನಾಟಕ)–2, ರೇವತಿ ವೀರಮಣಿ (ತಮಿಳುನಾಡು)–3
10,000 ಮೀ ಓಟ: ಪೂಜಾ ಎಚ್‌ (ರಾಜಸ್ತಾನ)–1. ಕಾಲ: 35:29.59, ಫೂಲನ್ ಪಾಲ್ (ಉತ್ತರ ಪ್ರದೇಶ)–2, ಜ್ಯೋತಿ (ಉತ್ತರ ಪ್ರದೇಶ)–3
ಜಾವೆಲಿನ್ ಥ್ರೋ: ಅನು ಅಮರ್‌ಪಾಲ್ ರಾಣಿ (ಉತ್ತರಪ್ರದೇಶ)–1. ಅಂತರ:62.83ಮೀ, ಸಂಜನಾ ಚೌಧರಿ (ರಾಜಸ್ತಾನ)–2, ಪುಷ್ಪಾ (ಹರಿಯಾಣ)–3.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.