ADVERTISEMENT

ಪ್ರೊ ಕಬಡ್ಡಿ:ಡ್ರಾ ಪಂದ್ಯದಲ್ಲಿ ತಲೈವಾಸ್

ಪಿಟಿಐ
Published 14 ನವೆಂಬರ್ 2018, 17:33 IST
Last Updated 14 ನವೆಂಬರ್ 2018, 17:33 IST

ಮುಂಬೈ: ಬುಧವಾರ ಇಲ್ಲಿ ನಡೆದ ತಮಿಳು ತಲೈವಾಸ್ ಮತ್ತು ಹರಿಯಾಣ ಸ್ಟೀಲರ್ಸ್‌ ನಡುವಣ ಪಂದ್ಯವು ಡ್ರಾ ಆಯಿತು.

ಉಭಯ ತಂಡಗಳು ಸಮಬಲದಿಂದ ಹಣಾಹಣಿ ನಡೆಸಿದವು. 32–32 ರಿಂದ ಪಂದ್ಯವು ಸಮವಾಯಿತು.

ತಲೈವಾಸ್ ತಂಡದಲ್ಲಿರುವ ಕರ್ನಾಟಕದ ಸುಖೇಶ್ ಹೆಗ್ಡೆ ಒಟ್ಟು ಏಳು ಪಾಯಿಂಟ್‌ಗಳ ಕಾಣಿಕೆ ನೀಡಿದರು. ಅವರೊಂದಿಗೆ ಉತ್ತಮವಾಗಿ ಆಡಿದ ಮಂಜೀತ್ ಚಿಲ್ಲಾರ ಟ್ಯಾಕಲ್‌ನಲ್ಲಿ ನಾಲ್ಕು ಪಾಯಿಂಟ್‌ಗಳನ್ನು ಕಬಳಿಸಿದರು.

ADVERTISEMENT

ಆದರೆ ಮಿಂಚಿನ ಆಟವಾಡಿದ ಹರಿಯಾಣದ ವಿಕಾಶ್ ಖಂಡೋಲಾ ಅವರು ರೇಡಿಂಗ್‌ನಲ್ಲಿ 10 ಮತ್ತು ನಾಲ್ಕು ಬೋನಸ್ ಪಾಯಿಂಟ್ಸ್‌ ಗಳಿಸಿ ತಂಡಕ್ಕೆ ಬಲ ತುಂಬಿದರು. ಇದರಿಂದಾಗಿ ಉಭಯ ತಂಡಗಳ ಪಾಯಿಂಟ್‌ಗಳ ಅಂತರ ಕಡಿಮೆಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.