ADVERTISEMENT

ಪ್ರೊ ಕಬಡ್ಡಿ: ತಮಿಳ್‌ ತಲೈವಾಸ್ ಎದುರು ಬೆಂಗಳೂರು ಬುಲ್ಸ್‌ಗೆ ಜಯ

ಪವನ್‌, ಕಾಶಿಲಿಂಗ ಅವರ ಅಮೋಘ ಆಟ

ಪಿಟಿಐ
Published 17 ಅಕ್ಟೋಬರ್ 2018, 19:23 IST
Last Updated 17 ಅಕ್ಟೋಬರ್ 2018, 19:23 IST
ತಮಿಳ್ ತಲೈವಾಸ್‌ ತಂಡದ ಆಟಗಾರರನನ್ನು ಬೆಂಗಳೂರು ಬುಲ್ಸ್‌ ತಂಡದವರು ಹಿಡಿದ ಕ್ಷಣ ಪ್ರೊ ಕಬಡ್ಡಿ ಮೀಡಿಯಾ ಚಿತ್ರ
ತಮಿಳ್ ತಲೈವಾಸ್‌ ತಂಡದ ಆಟಗಾರರನನ್ನು ಬೆಂಗಳೂರು ಬುಲ್ಸ್‌ ತಂಡದವರು ಹಿಡಿದ ಕ್ಷಣ ಪ್ರೊ ಕಬಡ್ಡಿ ಮೀಡಿಯಾ ಚಿತ್ರ   

ಸೋನೆಪತ್‌: ಪವನ್‌ ಶೆಹ್ರವತ್ ಮತ್ತು ಕಾಶಿಲಿಂಗ ಅಡಕೆ ಅವರ ಅಮೋಘ ಆಟದ ನೆರವಿನಿಂದ ಬೆಂಗಳೂರು ಬುಲ್ಸ್ ತಂಡ ಪ್ರೊ ಕಬಡ್ಡಿ ಲೀಗ್‌ನಲ್ಲಿ ಬುಧವಾರ ಜಯಭೇರಿ ಮೊಳಗಿಸಿತು. ಇಲ್ಲಿನ ಮೋತಿಲಾಲ್ ನೆಹರೂ ಕ್ರೀಡಾಶಾಲೆಯ ಅಂಗಣದಲ್ಲಿ ನಡೆದ ಪಂದ್ಯದಲ್ಲಿ ಈ ತಂಡ ತಮಿಳ್‌ ತಲೈವಾಸ್ ಎದುರು 44–35ರಿಂದ ಗೆದ್ದಿತು.

ಎದುರಾಳಿ ಪಾಳಯದಲ್ಲಿ ಸಂಚಲನ ಸೃಷ್ಟಿಸಿದ ಪವನ್ 16 ಪಾಯಿಂಟ್‌ಗಳೊಂದಿಗೆ ಮಿಂಚಿದರು. ಕಾಶಿಲಿಂಗ 12 ಪಾಯಿಂಟ್‌ ಗಳಿಸಿ ತಂಡಕ್ಕೆ ಉತ್ತಮ ಕಾಣಿಕೆ ನೀಡಿದರು. ಆಶಿಶ್ ಸಾಂಗ್ವಾನ್‌ ಮತ್ತು ಮಹೇಂದರ್ ಸಿಂಗ್ ತಲಾ ನಾಲ್ಕು ಮತ್ತು ಮೂರು ಪಾಯಿಂಟ್ ಗಳಿಸಿ ಮಿಂಚಿದರು.

ತಲೈವಾಸ್ ಪರವಾಗಿ ನಾಯಕ ಅಜಯ್ ಠಾಕೂರ್ ಒಬ್ಬರೇ ಮಿಂಚಿದರು. ಅವರು ಒಂಬತ್ತು ಪಾಯಿಂಟ್ ಗಳಿಸಿದರು. ತವರಿನಲ್ಲಿ ಏಕೈಕ ಪಂದ್ಯ ಗೆದ್ದು ಇಲ್ಲಿಗೆ ಬಂದಿದ್ದ ತಲೈವಾಸ್‌ ಈ ಸೋಲಿನೊಂದಿಗೆ ಆರು ಪಂದ್ಯಗಳಲ್ಲಿ ಐದನ್ನು ಸೋತಂತಾಯಿತು.

ADVERTISEMENT

ಬುಲ್ಸ್‌ ಆಡಿದ ಎರಡೂ ಪಂದ್ಯಗಳನ್ನು ಗೆದ್ದು ಬಿ ವಲಯದ ಪಾಯಿಂಟ್‌ ಪಟ್ಟಿಯಲ್ಲಿ ಎರಡನೇ ಸ್ಥಾನ ಗಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.