ADVERTISEMENT

Pro Kabaddi | ಕಬಡ್ಡಿ: ಯೋಧಾಸ್‌ಗೆ ಗೆಲುವು

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2022, 21:22 IST
Last Updated 16 ನವೆಂಬರ್ 2022, 21:22 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಪುಣೆ: ಪ್ರದೀಪ್‌ ನರ್ವಾಲ್‌ (22 ಪಾಯಿಂಟ್ಸ್‌) ಅವರ ಮಿಂಚಿನ ಆಟದ ನೆರವಿನಿಂದ ಯು.ಪಿ.ಯೋಧಾಸ್ ತಂಡ ಪ್ರೊ ಕಬಡ್ಡಿ ಲೀಗ್‌ನಲ್ಲಿ ಸುಲಭ ಗೆಲುವು ಪಡೆಯಿತು.

ಬಾಳೇವಾಡಿಯ ಶಿವಛತ್ರಪತಿ ಕ್ರೀಡಾ ಸಂಕೀರ್ಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಯೋಧಾಸ್‌ 50–31 ರಲ್ಲಿ ದಬಾಂಗ್‌ ಡೆಲ್ಲಿ ತಂಡವನ್ನು ಮಣಿಸಿತು. ವಿಜಯಿ ತಂಡ ವಿರಾಮದ ವೇಳೆಗೆ 29–14 ರಲ್ಲಿ ಮುನ್ನಡೆಯಲ್ಲಿತ್ತು.

ಪೈರೇಟ್ಸ್‌– ತಲೈವಾಸ್‌ ಪಂದ್ಯ ಟೈ: ಪಟ್ನಾ ಪೈರೇಟ್ಸ್‌ ಮತ್ತು ತಮಿಳ್ ತಲೈವಾಸ್‌ ನಡುವಿನ ದಿನದ ಮೊದಲ ಪಂದ್ಯ 33–33 ಪಾಯಿಂಟ್ಸ್‌ಗಳಿಂದ ‘ಟೈ‘ನಲ್ಲಿ ಕೊನೆಗೊಂಡಿತು.

ADVERTISEMENT

‍ಪ್ರಥಮಾರ್ಧದಲ್ಲಿ ಪೈರೇಟ್ಸ್‌ 20–14 ರಲ್ಲಿ ಮುನ್ನಡೆ ಸಾಧಿಸಿತ್ತು. ನರೇಂದರ್‌ (14 ಪಾಯಿಂಟ್ಸ್‌) ಅವರ ಉತ್ತಮ ಆಟದ ನೆರವಿನಿಂದ ಎರಡನೇ ಅವಧಿಯಲ್ಲಿ ತಿರುಗೇಟು ನೀಡಿದ ತಲೈವಾಸ್‌ ಸೋಲು ತಪ್ಪಿಸಿಕೊಂಡಿತು.

ನಾಳೆಯಿಂದ ಹೈದರಾಬಾದ್‌ನಲ್ಲಿ ಪಂದ್ಯ: ಬುಧವಾರದ ಪಂದ್ಯದೊಂದಿಗೆ ಲೀಗ್‌ನ ಪುಣೆ ಲೆಗ್‌ಗೆ ತೆರೆಬಿದ್ದಿದೆ. ಅಂತಿಮ ಲೆಗ್‌ನ ಪಂದ್ಯಗಳು ಹೈದರಾಬಾದ್‌ನ ಗಚ್ಚಿಬೌಳಿ ಒಳಾಂಗಣ ಕ್ರೀಡಾಂಗಣದಲ್ಲಿ ಶುಕ್ರವಾರದಿಂದ ನಡೆಯಲಿದೆ.

ಶುಕ್ರವಾರದ ಪಂದ್ಯಗಳು
* ಪುಣೇರಿ ಪಲ್ಟನ್‌– ಹರಿಯಾಣ ಸ್ಟೀಲರ್ಸ್
*ಬೆಂಗಾಲ್‌ ವಾರಿಯರ್ಸ್‌– ತೆಲುಗು ಟೈಟನ್ಸ್‌
*ಗುಜರಾತ್‌ ಜೈಂಟ್ಸ್‌– ಬೆಂಗಳೂರು ಬುಲ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.