ಕೋಲ್ಕತ್ತ: ಮೆರಾಜ್ ಶೇಖ್ ಅವರ ಅಮೋಘ ಆಟದ ಬಲದಿಂದ ದಬಂಗ್ ಡೆಲ್ಲಿ ತಂಡವು ಇಲ್ಲಿ ಭಾನುವಾರ ನಡೆದ ಪ್ರೊ ಕಬಡ್ಡಿ ಲೀಗ್ ಟೂರ್ನಿಯ ಪಂದ್ಯದಲ್ಲಿ ಜಯಭೇರಿ ಬಾರಿಸಿತು.
ನೇತಾಜಿ ಒಳಾಂಗಣ ಕ್ರೀಡಾಂಗಣದಲ್ಲಿ ಕಿಕ್ಕಿರಿದು ಸೇರಿದ್ದ ಅಭಿಮಾನಿಗಳ ಎದುರು ನಡೆದ ಹಣಾಹಣಿಯಲ್ಲಿ ದಬಂಗ್ ತಂಡವು 37–31ರಿಂದ ಬೆಂಗಾಲ್ ವಾರಿಯರ್ಸ್ ವಿರುದ್ಧ ಗೆದ್ದಿತು. ತಂಡದ ಮೆರಾಜ್ ಅವರು ರೇಡಿಂಗ್‌ನಲ್ಲಿ ಹತ್ತು ಮತ್ತು ಮೂರು ಬೋನಸ್ ಅಂಕಗಳನ್ನು ಗಳಿಸಿದರು. ನವೀನ್ ಕುಮಾರ್ ರೇಡಿಂಗ್ ಮತ್ತು ಬೋನಸ್ ಸೇರಿ ಆರು ಪಾಯಿಂಟ್‌ಗಳನ್ನು ಪಡೆದರು. ಅವರಿಗೆ ಉತ್ತಮ ಜೊತೆ ನೀಡಿದ ಚಂದನ್ ರಂಜೀತ್ ನಾಲ್ಕು ಪಾಯಿಂಟ್ ಗಳಿಸಿದರು. ಟ್ಯಾಕಲ್‌ನಲ್ಲಿ ರವೀಂದ್ರ ಪಹಾಲ್ ಮತ್ತು ಜೋಗಿಂದರ್ ಸಿಂಗ್ ನರ್ವಾಲ್ ಅವರು ತಲಾ ಎರಡು ಅಂಕಗಳನ್ನು ಗಳಿಸಿದರು.
ಬೆಂಗಾಲ್ ವಾರಿಯರ್ಸ್ ತಂಡದ ಮಣಿಂದರ್ ಸಿಂಗ್ ರೇಡಿಂಗ್‌ನಲ್ಲಿ ಒಂಬತ್ತು ಅಂಕ ಗಳಿಸಿ ಮಿಂಚಿದರು. ಭೂಪಿಂದರ್ ಸಿಂಗ್ ಟ್ಯಾಕಲ್‌ನಲ್ಲಿ ಒಂದು ಮತ್ತು ನಾಲ್ಕು ಬೋನಸ್ ಅಂಕಗಳನ್ನು ಗಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.