ADVERTISEMENT

ಈ ಸಲ ಯಾರಾಗುವರು ಕೋಟ್ಯಾಧಿಪತಿ?

ಇಂದಿನಿಂದ ಎರಡು ದಿನ ಪ್ರೊ ಕಬಡ್ಡಿ ಏಳನೇ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2019, 20:10 IST
Last Updated 7 ಏಪ್ರಿಲ್ 2019, 20:10 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಪ್ರೊ ಕಬಡ್ಡಿ ಲೀಗ್‌ (ಪಿಕೆಎಲ್‌) ಆಟಗಾರರ ಹರಾಜು ಪ್ರಕ್ರಿಯೆ ಸೋಮವಾರ ಮತ್ತು ಮಂಗಳವಾರ ಇಲ್ಲಿ ನಡೆಯಲಿದೆ.

12 ಫ್ರಾಂಚೈಸ್‌ಗಳು ವಿಶ್ವ ಶ್ರೇಷ್ಠ ಆಟಗಾರರನ್ನು ಖರೀದಿಸಲು ವೇದಿಕೆ ಸಿದ್ಧಗೊಂಡಿದ್ದು, ಯಾರು ಯಾವ ತಂಡದ ಪಾಲಾಗಲಿದ್ದಾರೆ, ಯಾರಿಗೆ ಎಷ್ಟು ಮೊತ್ತ ಸಿಗಲಿದೆ ಎಂಬ ಕುತೂಹಲ‌ ಗರಿಗೆದರಿದೆ.

ಫ್ರಾಂಚೈಸ್‌ಗಳು ಹರಾಜಿನಲ್ಲಿ ವಿನಿಯೋಗಿಸಬಹುದಾದ ಮೊತ್ತವನ್ನು ಈ ಸಲ ₹4.4 ಕೋಟಿಗೆ ಹೆಚ್ಚಿಸಲಾಗಿದೆ. ಪ್ರತಿ ಫ್ರಾಂಚೈಸ್‌ ಕನಿಷ್ಠ 18 ಮತ್ತು ಗರಿಷ್ಠ 25 ಆಟಗಾರರನ್ನು ಸೆಳೆದುಕೊಳ್ಳಬಹುದಾಗಿದೆ. ಜೊತೆಗೆ ಕನಿಷ್ಠ ಇಬ್ಬರು ಮತ್ತು ಗರಿಷ್ಠ ನಾಲ್ಕು ಮಂದಿ ವಿದೇಶಿ ಆಟಗಾರರನ್ನು ಹೊಂದಿರಬಹುದಾಗಿದೆ.

ADVERTISEMENT

‘ನ್ಯೂ ಯಂಗ್‌ ಪ್ಲೇಯರ್ಸ್‌’ ವಿಭಾಗದಲ್ಲಿ ಸ್ಥಾನ ಪಡೆದಿರುವ ಆಟಗಾರರ ಪೈಕಿ ಆರು ಮಂದಿಯನ್ನು ಪ್ರತಿ ಫ್ರಾಂಚೈಸ್‌ ಖರೀದಿಸಲೇಬೇಕು.

ರಾಹುಲ್‌ ಚೌಧರಿ, ರಿಷಾಂಕ್‌ ದೇವಾಡಿಗ ಮತ್ತು ಅಬೋರ್‌ ಮೊಹಾಜರ್‌ಮಿಘಾನಿ ಅವರು ಕಣದಲ್ಲಿದ್ದು ಇವರಿಗೆ ಹೆಚ್ಚಿನ ಮೊತ್ತ ಸಿಗುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.