ADVERTISEMENT

ಸೂಪರ್‌ ರೇಡ್‌ನಲ್ಲಿ ಮಣಿದ ಬುಲ್ಸ್‌; ಪುಣೇರಿಗೆ ಜಯ

ಪಿಟಿಐ
Published 2 ಅಕ್ಟೋಬರ್ 2025, 23:52 IST
Last Updated 2 ಅಕ್ಟೋಬರ್ 2025, 23:52 IST
ಚೆನ್ನೈನಲ್ಲಿ ಗುರುವಾರ ನಡೆದ ಪ್ರೊಕಬಡ್ಡಿ ಟೂರ್ನಿಯ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಮತ್ತು ಪುಣೇರಿ ಪಲ್ಟನ್ ಆಟಗಾರರ ಜಿದ್ದಾಜಿದ್ದಿ 
ಚೆನ್ನೈನಲ್ಲಿ ಗುರುವಾರ ನಡೆದ ಪ್ರೊಕಬಡ್ಡಿ ಟೂರ್ನಿಯ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಮತ್ತು ಪುಣೇರಿ ಪಲ್ಟನ್ ಆಟಗಾರರ ಜಿದ್ದಾಜಿದ್ದಿ    

ಚೆನ್ನೈ : ರೋಚಕ ಹಣಾಹಣಿ ನಡೆದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್‌ ತಂಡವು ‘ಸೂಪರ್‌ ರೇಡ್‘ನಲ್ಲಿ ಪುಣೇರಿ ಪಲ್ಟನ್ ವಿರುದ್ಧ ಪರಾಭವಗೊಂಡಿತು. 

ಗುರುವಾರ ಇಲ್ಲಿ ನಡೆದ ಪಂದ್ಯದಲ್ಲಿ ಪುಣೇರಿ ಮತ್ತು ಬೆಂಗಳೂರು ತಂಡಗಳು ನಿಗದಿಯ ಅವಧಿಯೊಳಗಿನ ಹೋರಾಟದಲ್ಲಿ 29–29ರಿಂದ ಟೈ ಸಾಧಿಸಿದವು. 

ಸೂಪರ್‌ ರೇಡ್‌ನಲ್ಲಿ ಜಿದ್ದಾಜಿದ್ದಿ ನಡೆಸಿದಾಗ ಪುಣೇರಿ 6–4ರಿಂದ ಬೆಂಗಳೂರು ವಿರುದ್ಧ ಮೇಲುಗೈ ಸಾಧಿಸಿತು. 

ADVERTISEMENT

ನಿಗದಿತ ವೇಳೆಯ ಆಟದಲ್ಲಿ ಬೆಂಗಳೂರು ತಂಡದ ಆಶಿಶ್ ಮಲಿಕ್ (6) ಮತ್ತು ಅಲಿರೇಜಾ ಮಿರ್ಝಾನ್ (6) ಮಿಂಚಿದರು. ಪುಣೇರಿ ತಂಡದ  ಆದಿತ್ಯ ಶಿಂಧೆ (7) ಮತ್ತು ನಾಯಕ ಪಂಕಜ್ (4) ಅವರು ರೇಡಿಂಗ್‌ನಲ್ಲಿ ಮಿಂಚಿದರು.

ಪ್ರಥಮಾರ್ಧದಲ್ಲಿ ಪುಣೇರಿ ತಂಡವು 17–13ರಿಂದ ಮುನ್ನಡೆ ಗಳಿಸಿತ್ತು. ನಂತರದ ಅವಧಿಯಲ್ಲಿ ತಿರುಗೇಟು ನೀಡಿದ ಬೆಂಗಳೂರು 16–12ರ ಮುನ್ನಡೆ ಸಾಧಿಸಿತು. ಇದರಿಂದಾಗಿ ಒಟ್ಟು ಪಂದ್ಯವು ಟೈ ಆಯಿತು. 

ಇಂದಿನ ಪಂದ್ಯಗಳು

ದಬಂಗ್ ಡೆಲ್ಲಿ–ಯುಪಿ ಯೋಧಾಸ್ (ರಾತ್ರಿ 8)

ತಮಿಳ್ ತಲೈವಾಸ್–ಹರಿಯಾಣ ಸ್ಟೀಲರ್ಸ್ (ರಾತ್ರಿ 9)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.