ADVERTISEMENT

Pro Kabaddi: ಜೈಪುರಕ್ಕೆ ಮಣಿದ ಯೋಧಾಸ್

ಪಿಟಿಐ
Published 13 ಸೆಪ್ಟೆಂಬರ್ 2025, 23:30 IST
Last Updated 13 ಸೆಪ್ಟೆಂಬರ್ 2025, 23:30 IST
   

ಜೈಪುರ: ನಿತಿನ್‌ ಕುಮಾರ್‌ ಮತ್ತು ಅಲಿ ಸಮದಿ ಅವರ ಅಮೋಘ ರೇಡಿಂಗ್ ಬಲದಿಂದ ಆತಿಥೇಯ ಜೈಪುರ ಪಿಂಕ್‌ ಪ್ಯಾಂಥರ್ಸ್‌ ತಂಡವು ಪ್ರೊ ಕಬಡ್ಡಿ ಲೀಗ್‌ನ ಪಂದ್ಯದಲ್ಲಿ 41–29ರಿಂದ ಯು.ಪಿ. ಯೋಧಾಸ್‌ ತಂಡವನ್ನು ಮಣಿಸಿತು.

ಇಲ್ಲಿನ ಎಸ್‌ಎಂಎಸ್‌ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದ ಮೊದಲಾರ್ಧದಲ್ಲಿ 23–12ರಿಂದ ಮುನ್ನಡೆ ಪಡೆದ ಜೈಪುರ ತಂಡವು ದ್ವಿತೀಯಾರ್ಧದಲ್ಲೂ ಪಾರಮ್ಯ ಮೆರೆಯಿತು.

ಜೈಪುರ ಪರ ನಿತಿನ್‌ ಮತ್ತು ಸಮದಿ ಕ್ರಮವಾಗಿ 11 ಮತ್ತು 10 ಅಂಕ ಗಳಿಸಿದರು. ಯೋಧಾಸ್‌ ಪರ ಕನ್ನಡಿಗ ಗಗನ್‌ ಗೌಡ (15 ಅಂಕ) ಮಿಂಚಿದರು. ಎರಡು ಬಾರಿಯ ಚಾಂಪಿಯನ್‌ ಜೈಪುರ ತಂಡಕ್ಕೆ ಇದು ಆರು ಪಂದ್ಯಗಳಲ್ಲಿ ಮೂರನೇ ಗೆಲುವಾಗಿದೆ.

ADVERTISEMENT

ದಿನದ ಮತ್ತೊಂದು ಪಂದ್ಯದಲ್ಲಿ ಪುಣೇರಿ ಪಲ್ಟನ್‌ ತಂಡವು 39–33ರಿಂದ ತೆಲುಗು ಟೈಟನ್ಸ್ ತಂಡವನ್ನು ಮಣಿಸಿತು. ಪುಣೇರಿ ತಂಡಕ್ಕೆ ಏಳು ಪಂದ್ಯಗಳಲ್ಲಿ ಇದು ಐದನೇ ಗೆಲುವಾಗಿದೆ. ಒಟ್ಟು 10 ಅಂಕಗಳೊಂದಿಗೆ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.