ADVERTISEMENT

ಪ್ರೊ ಕಬಡ್ಡಿ: ಜೈಪುರ್ ಪಿಂಕ್‌ ಪ್ಯಾಂಥರ್ಸ್‌ಗೆ ಗೆಲುವು

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2024, 20:14 IST
Last Updated 19 ಫೆಬ್ರುವರಿ 2024, 20:14 IST
<div class="paragraphs"><p>ಪ್ರೊ ಕಬಡ್ಡಿ ಲೀಗ್‌</p></div>

ಪ್ರೊ ಕಬಡ್ಡಿ ಲೀಗ್‌

   

ಪಂಚಕುಲಾ: ಅರ್ಜುನ್ ದೇಶ್ವಾಲ್ ಅವರ ಭರ್ಜರಿ ರೈಡಿಂಗ್ (13 ಪಾಯಿಂಟ್ಸ್‌) ಬಲದಿಂದ ಹಾಲಿ ಚಾಂಪಿಯನ್ ಜೈಪುರ್ ಪಿಂಕ್‌ ಪ್ಯಾಂಥರ್ಸ್ ತಂಡ, ಪ್ರೊ ಕಬಡ್ಡಿ ಲೀಗ್‌ನಲ್ಲಿ ಸೋಮವಾರ ಗುಜರಾತ್‌ ಜೈಂಟ್ಸ್ ತಂಡವನ್ನು 45–36 ಪಾಯಿಂಟ್‌ಗಳಿಂದ ಸದೆಬಡಿಯಿತು.  

ದೇಶ್ವಾಲ್ ಅವರಿಗೆ ಶುಭಂ ಶೆಲ್ಕೆ (9 ಪಾಯಿಂಟ್ಸ್‌), ಸಮಿತ್ ಮಲಿಕ್ (6) ಮತ್ತು ಶೌಲ್ ಕುಮಾರ್ (6) ಬೆಂಬಲ ನೀಡಿದರು. ಪ್ಯಾಂಥರ್ಸ್ ತಂಡವು ಆರಂಭದಿಂದಲೇ ಪಾರಮ್ಯ ಮೆರೆಯಿತು.

ADVERTISEMENT

ಮಧ್ಯಂತರ ವೇಳೆಗೆ 28–14 ರಿಂದ ಮುನ್ನಡೆ ಪಡೆದ ಪ್ಯಾಂಥರ್ಸ್, ವಿರಾಮದ ಬಳಿಕವೂ ಉತ್ತಮ ಪ್ರದರ್ಶನ ನೀಡಿ, 14 ಪಾಯಿಂಟ್ಸ್‌ ಅಂತರದ ಗೆಲುವು ಸಾಧಿಸಿತು. ಎದುರಾಳಿ ತಂಡವನ್ನು ಮೂರು ಬಾರಿ ಆಲೌಟ್ ಮಾಡುವಲ್ಲಿ ಯಶಸ್ವಿಯಾಯಿತು.  

ಜೈಂಟ್ಸ್‌ ಪರ ಏಕಾಂಗಿ ಹೋರಾಟ ನಡೆಸಿದ ಪಾರ್ಟಿಕ್ ದಹಿಯಾ (16 ಅಂಕ) ತಂಡದ ಸೋಲು ತಪ್ಪಿಸಲು ಸಾಧ್ಯವಾಗಲಿಲ್ಲ. ಸಹ ಆಟಗಾರ ದೀಪಕ್ ರಾಠಿ ಅವರು ಆರು ಅಂಕ ಗಳಿಸಿದರು.

ಪುಣೇರಿ ಪಲ್ಟನ್ ತಂಡವು  ದಿನದ ಎರಡನೇ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್‌ ತಂಡವನ್ನು 51–36 ಪಾಯಿಂಟ್‌ಗಳಿಂದ ಸೋಲಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.