ADVERTISEMENT

ಕಬಡ್ಡಿ: ಯೋಧಾಗೆ ಒಲಿದ ಜಯ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2018, 20:13 IST
Last Updated 16 ಡಿಸೆಂಬರ್ 2018, 20:13 IST
ಜೈಪುರ ಪಿಂಕ್‌ ಪ್ಯಾಂಥರ್ಸ್‌ ಆಟಗಾರರಿಂದ ತಪ್ಪಿಸಿಕೊಂಡ ಗುಜರಾತ್ ಫಾರ್ಚೂನ್‌ ಜೈಂಟ್ಸ್ ತಂಡದ ಸಚಿನ್‌ –ಪ್ರೊ ಕಬಡ್ಡಿ ಲೀಗ್ ಚಿತ್ರ
ಜೈಪುರ ಪಿಂಕ್‌ ಪ್ಯಾಂಥರ್ಸ್‌ ಆಟಗಾರರಿಂದ ತಪ್ಪಿಸಿಕೊಂಡ ಗುಜರಾತ್ ಫಾರ್ಚೂನ್‌ ಜೈಂಟ್ಸ್ ತಂಡದ ಸಚಿನ್‌ –ಪ್ರೊ ಕಬಡ್ಡಿ ಲೀಗ್ ಚಿತ್ರ   

ಪಂಚಕುಲಾ: ಯು.ಪಿ. ಯೋಧಾ ತಂಡವು ಇಲ್ಲಿ ನಡೆಯುತ್ತಿರುವ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಭಾನುವಾರ ಜಯಿಸಿತು.

ತಾವೂ ದೇವಿಲಾಲ್ ಸ್ಪೋರ್ಟ್ಸ್‌ ಕಾಂಪ್ಲೆಕ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ಯೋಧಾ ತಂಡವು 47–31 ರಿಂದ ಪಟ್ನಾ ಪೈರೆಟ್ಸ್‌ ವಿರುದ್ಧ ಗೆದ್ದಿತು.

ಯೋಧಾ ತಂಡದಲ್ಲಿರುವ ಕನ್ನಡಿಗ ಪ್ರಶಾಂತ್ ಕುಮಾರ್ ರೈ ಆಲ್‌ರೌಂಡ್ ಆಟವಾಡಿದರು. ರೇಡಿಂಗ್‌ನಲ್ಲಿ ಏಳು, ಟ್ಯಾಕಲ್‌ನಲ್ಲಿ ಒಂದು ಮತ್ತು ಮೂರು ಬೋನಸ್‌ ಅಂಕಗಳನ್ನು ಗಳಿಸಿದರು. ಶ್ರೀಕಾಂತ್ ಜಾಧವ್ ಎಂಟು ಅಂಕಗಳನ್ನು ತಂಡಕ್ಕೆ ಕಾಣಿಕೆ ನೀಡಿದರು. ಅಜಾದ್ ಸಿಂಗ್ ರೇಡಿಂಗ್‌ನಲ್ಲಿ ಏಳು ಮತ್ತು ಒಂದು ಬೋನಸ್ ಅಂಕ ಪಡೆದರು. ರಕ್ಷಣಾ ವಿಭಾಗದಲ್ಲಿ ಮಿಂಚಿದ ಸಚಿನ್ ಕುಮಾರ್ ಮತ್ತು ಜೀವಾ ಕುಮಾರ ಅವರು ಕ್ರಮವಾಗಿ ಐದು ಮತ್ತು ನಾಲ್ಕು ಅಂಕಗಳನ್ನು ಗಳಿಸಿದರು.

ADVERTISEMENT

ಪಟ್ನಾ ತಂಡದ ಮಂಜೀತ್ ಹತ್ತು ಅಂಕ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.