ಪ್ರೊ ಕಬಡ್ಡಿ ಲೀಗ್
ಪುಣೆ: ಗೆಲುವಿನ ಓಟ ಮುಂದುವರಿಸಿದ ದಬಾಂಗ್ ಡೆಲ್ಲಿ ಕೆ.ಸಿ. 41–35 ರಿಂದ ಗುಜರಾತ್ ಜೈಂಟ್ಸ್ ತಂಡವನ್ನು ಸೋಲಿಸಿ ಪ್ರೊ ಕಬಡ್ಡಿ ಲೀಗ್‌ನ 11ನೇ ಆವೃತ್ತಿಯಲ್ಲಿ ಎರಡನೇ ಸೆಮಿಫೈನಲ್ ಸ್ಥಾನವನ್ನು ಖಚಿತಪಡಿಸಿಕೊಂಡಿತು.
ಸೀಸನ್ ಎಂಟರ ಚಾಂಪಿಯನ್ ಆಗಿದ್ದ ಡೆಲ್ಲಿ ತನ್ನ ಅಜೇಯ ಓಟವನ್ನು 15 ಪಂದ್ಯಗಳಿಗೇರಿಸಿತು. ಇದು ಪ್ರೊ ಕಬಡ್ಡಿ ಲೀಗ್‌ನಲ್ಲೇ ದಾಖಲೆಯಾಗಿದೆ. ತಂಡ 22 ಪಂದ್ಯಗಳಿಂದ 81 ಪಾಯಿಂಟ್ ಗಳಿಸಿ ಲೀಗ್ ವ್ಯವಹಾರ ಮುಗಿಸಿತು. ಹರಿಯಾಣ ಸ್ಟೀಲರ್ಸ್ ಈ ಮೊದಲೇ 84 ಅಂಕಗಳೊಡನೆ ಮೊದಲ ಸ್ಥಾನ ಖಚಿತಪಡಿಸಿಕೊಂಡಿತ್ತು.
ಆಶು ಮಲಿಕ್ 14 ಅಂಕಗಳೊಂದಿಗೆ ಮತ್ತೊಮ್ಮೆ ಮಿಂಚಿದರು. ಇದು ಅವರಿಗೆ ಋತುವಿನ 18ನೇ ಸೂಪರ್ ಟೆನ್.
ಪುಣೇರಿ ಪಲ್ಟನ್ ದಿನದ ಎರಡನೇ ಪಂದ್ಯದಲ್ಲಿ 42–32 ರಿಂದ ತಮಿಳ್ ತಲೈವಾಸ್ ತಂಡವನ್ನು ಮಣಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.