ADVERTISEMENT

ಪ್ರೊ ಕಬಡ್ಡಿ ಲೀಗ್‌: ಮೂರನೇ ಸ್ಥಾನಕ್ಕೇರಿದ ಯೋಧಾಸ್

ಪಿಟಿಐ
Published 24 ಡಿಸೆಂಬರ್ 2024, 18:36 IST
Last Updated 24 ಡಿಸೆಂಬರ್ 2024, 18:36 IST
<div class="paragraphs"><p>ಬೆಂಗಳೂರು ಬುಲ್ಸ್ ಮತ್ತು ಯುಪಿ ಯೋಧಾಸ್ ನಡುವಣ ಪಂದ್ಯದ ದೃಶ್ಯ.</p></div>

ಬೆಂಗಳೂರು ಬುಲ್ಸ್ ಮತ್ತು ಯುಪಿ ಯೋಧಾಸ್ ನಡುವಣ ಪಂದ್ಯದ ದೃಶ್ಯ.

   

ಪುಣೆ: ಯು.‍ಪಿ.ಯೋಧಾಸ್ ತಂಡ ಪ್ರೊ ಕಬಡ್ಡಿ ಲೀಗ್‌ನ ತನ್ನ ಕೊನೆಯ ಲೀಗ್‌ ಪಂದ್ಯದಲ್ಲಿ 44–30 ಅಂಕಗಳಿಂದ ಬೆಂಗಳೂರು ಬುಲ್ಸ್ ತಂಡವನ್ನು ಮಣಿಸಿತು. ಈ ಮೂಲಕ ಯೋಧಾಸ್‌ ತಂಡ ಲೀಗ್‌ನಲ್ಲಿ 79 ಅಂಕಗಳೊಡನೆ ಮೂರನೇ ಸ್ಥಾನ ಪಡೆಯಿತು.

ಕೊನೆಯ ಸ್ಥಾನ ಪಡೆದ ಬುಲ್ಸ್‌ 22 ಪಂದ್ಯಗಳಲ್ಲಿ 19ನೇ ಸೋಲು ಕಂಡಿತು. ಆದರೆ ತಂಡದ ನಾಯಕ ಹಾಗೂ ಪಿಕೆೆೆಎಲ್‌ ದಂತಕತೆಯಾಗಿರುವ ಪ್ರದೀಪ್ ನರ್ವಾಲ್ 1,800 ರೇಟ್‌ ಪಾಯಿಂಟ್‌ಗಳ ಅಸಾಧಾರಣ ಮೈಲಿಗಲ್ಲು ತಲುಪಿದರು. ಈ ಪಂದ್ಯದಲ್ಲಿ ಅವರು 6 ಅಂಕ ಗಳಿಸಿದರು.

ADVERTISEMENT

ಯೋಧಾಸ್ ತಂಡ ಈ ಪಂದ್ಯದಲ್ಲಿ ಪ್ರಮುಖ ರೇಡರ್ ಗಗನ್ ಗೌಡ ಅವರನ್ನು ಕಣಕ್ಕಿಳಿಸಲಿಲ್ಲ.
ಶಿವಂ ಚೌಧರಿ ಆಲ್‌ರೌಂಡ್‌ ಪ್ರದರ್ಶನ ನೀಡಿ 13 ಅಂಕ ಗಳಿಸಿದರು.

ಯು ಮುಂಬಾ ಇನ್ನೊಂದು ಪಂದ್ಯದಲ್ಲಿ 36–27 ಅಂಕಗಳಿಂದ ಬೆಂಗಾಲ್ ವಾರಿಯರ್ಸ್ ತಂಡವನ್ನು ಸೋಲಿಸಿ 71 ಪಾಯಿಂಟ್‌ಗಳೊಡನೆ ಐದನೇ ಸ್ಥಾನ ಪಡೆಯಿತು.

ನಾಳೆ ಎಲಿಮಿನೇಟರ್ ಪಂದ್ಯಗಳು:

ಯುಪಿ ಯೋಧಾಸ್‌ ಗುರುವಾರ ನಡೆಯುವ ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಜೈಪುರ ಪಿಂಕ್‌ ಪ್ಯಾಂಥರ್ಸ್ (70 ಅಂಕ) ವಿರುದ್ಧ ಆಡಲಿದೆ. ಯು ಮುಂಬಾ ತಂಡ ಎರಡನೇ ಎಲಿಮಿನೇಟರ್ ಪಂದ್ಯದಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಪಟ್ನಾ ಪೈರೇಟ್ಸ್ (77 ಅಂಕ) ವಿರುದ್ಧ ಆಡಲಿದೆ. ಮತ್ತೊಂದು ಪಂದ್ಯದಲ್ಲಿ ಯು ಮುಂಬಾ ತಂಡ ಬೆಂಗಾಲ್‌ ವಾರಿಯರ್ಸ್‌ 36–27 ಅಂಗಳಿಂದ ಗೆದ್ದುಕೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.