ADVERTISEMENT

ಪ್ರೊ ಕಬಡ್ಡಿ | ಭರತ್ ಅಮೋಘ ಆಟ: ಟೈಟನ್ಸ್‌ಗೆ ಜಯ

ಏಜೆನ್ಸೀಸ್
Published 10 ಸೆಪ್ಟೆಂಬರ್ 2025, 16:20 IST
Last Updated 10 ಸೆಪ್ಟೆಂಬರ್ 2025, 16:20 IST
   

ವಿಶಾಖಪಟ್ಟಣ: ಆಲ್‌ರೌಂಡರ್ ಭರತ್ ಅಮೋಘ ಆಟದ ಬಲದಿಂದ ತೆಲುಗು ಟೈಟನ್ಸ್ ತಂಡವು ಪ್ರೊ ಕಬಡ್ಡಿ ಟೂರ್ನಿಯ ಪಂದ್ಯದಲ್ಲಿ ಜಯಸಾಧಿಸಿತು. 

ವಿಶ್ವನಾಥ್ ಸ್ಪೋರ್ಟ್ಸ್ ಕ್ಲಬ್ ಒಳಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟೈಟನ್ಸ್ ತಂಡವು 45–37ರಿಂದ ಯು ಮುಂಬಾದ ಸವಾಲನ್ನು ಮೀರಿ ನಿಂತಿತು. ಭರತ್ 13 ಅಂಕಗಳನ್ನು ಗಳಿಸಿ ತಂಡಕ್ಕೆ ಗೆಲುವಿನ ಕಾಣಿಕೆ ನೀಡಿದರು. 

16 ಸಲ ದಾಳಿ ಮಾಡಿದ ಅವರು 10 ಟಚ್ ಪಾಯಿಂಟ್‌ಗಳನ್ನು ಗಳಿಸಿದರು. ಎರಡು ಬೋನಸ್ ಮತ್ತು ಒಂದು ಟ್ಯಾಕಲ್ ಪಾಯಿಂಟ್ ಗಳಿಸಿದರು. ರೇಡರ್ ಚೇತನ್ ಸೊಹು ಆರು ಅಂಕ ಗಳಿಸಿದರು. ಅವಿ ದುಹಾನ್ ಹಾಗೂ ಅಜಿತ್ ಪವಾರ್ ಅವರು ರಕ್ಷಣೆ ವಿಭಾಗದಲ್ಲಿ ತಲಾ 3 ಅಂಕ ಗಳಿಸಿದರು. ನಾಯಕ, ಆಲ್‌ರೌಂಡರ್ ವಿಜಯ್ ಮಲಿಕ್ 5 ಅಂಕ ಪಡೆದರು. 

ADVERTISEMENT

ಮುಂಬಾ ತಂಡದಲ್ಲಿ ಸತೀಶ್ ಕಣ್ಣನ್ ಮತ್ತು ನಾಯಕ ಸುನಿಲ್ ಕುಮಾರ್ ಅವರೂ ದಿಟ್ಟ ಹೋರಾಟ ಮಾಡಿದರು. ತಲಾ ಆರು ಅಂಕ ಗಳಿಸಿದರು.  ಬದಲೀ ಆಟಗಾರ ಸಂದೀಪ್ ಅವರು ತಮ್ಮಚುರುಕಾದ ದಾಳಿಯ ಮೂಲಕ ಏಳು ಅಂಕ ಪಡೆದರು. ಆದರೆ ತಂಡದ ಸೋಲು ತಪ್ಪಿಸಲು ಅವರಿಗೂ ಸಾಧ್ಯವಾಗಲಿಲ್ಲ. ಟೈಟನ್ಸ್ ತಂಡಕ್ಕೆ ಇದು ಮೂರನೇ ಜಯ. ಒಟ್ಟು 15 ಅಂಕ ಗಳಿಸಿರುವ ತಂಡವು ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಮುಂಬಾ ತಂಡವು ನಾಲ್ಕನೇ ಸ್ಥಾನದಲ್ಲಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.