ADVERTISEMENT

ಅ.18ರಿಂದ ಪ್ರೊ ಕಬಡ್ಡಿ ಟೂರ್ನಿ: ಹೈದರಾಬಾದಿನಲ್ಲಿ ಉದ್ಘಾಟನಾ ಪಂದ್ಯ

ಪಿಟಿಐ
Published 10 ಸೆಪ್ಟೆಂಬರ್ 2024, 4:22 IST
Last Updated 10 ಸೆಪ್ಟೆಂಬರ್ 2024, 4:22 IST
<div class="paragraphs"><p> ಪ್ರೊ ಕಬಡ್ಡಿ ಲೀಗ್‌ ಟೂರ್ನಿ (ಸಂಗ್ರಹ ಚಿತ್ರ)&nbsp;</p></div>

ಪ್ರೊ ಕಬಡ್ಡಿ ಲೀಗ್‌ ಟೂರ್ನಿ (ಸಂಗ್ರಹ ಚಿತ್ರ) 

   

ನವದೆಹಲಿ: ಪ್ರೊ ಕಬಡ್ಡಿ 11ನೇ ಆವೃತ್ತಿಯ ಟೂರ್ನಿಯ ಅಕ್ಟೋಬರ್ 18ರಿಂದ ಆರಂಭವಾಗಲಿದೆ. ನವೆಂಬರ್ 9ರವರೆಗೂ ಹೈದರಾಬಾದಿನ ಗಚಿಬೌಳಿ ಒಳಾಂಗಣ ಕ್ರೀಡಾಂಗಣದಲ್ಲಿ ಮೊದಲ ಲೆಗ್‌ ನಡೆಯಲಿದೆ. 

ಮೊದಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಮತ್ತು ತೆಲುಗು ಟೈಟನ್ಸ್ ಮುಖಾಮುಖಿಯಾಗಲಿವೆ. ಎರಡನೇ ಪಂದ್ಯದಲ್ಲಿ ಯು ಮುಂಬಾ ಮತ್ತು ದಬಾಂಗ್ ಡೆಲ್ಲಿ ವಿರುದ್ಧ ಆಡಲಿದೆ. 

ADVERTISEMENT

ನವೆಂಬರ್ 10ರಿಂದ ಡಿಸೆಂಬರ್ 1ರವರೆಗೆ ನೋಯ್ಡಾ ಒಳಾಂಗಣ ಕ್ರೀಡಾಂಗಣದಲ್ಲಿ ಎರಡನೇ ಲೆಗ್ ಮತ್ತು ಡಿ.3 ರಿಂದ 24ರವರೆಗೆ ಪುಣೆಯ ಬಾಲೆವಾಡಿ ಕ್ರೀಡಾಂಗಣದಲ್ಲಿ ಮೂರನೇ ಲೆಗ್ ಪಂದ್ಯಗಳು ನಡೆಯಲಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.