ADVERTISEMENT

ಪ್ರೊ ಕಬಡ್ಡಿ ಲೀಗ್‌ : ವಾರಿಯರ್ಸ್ ಮಣಿಸಿದ ಜೈಂಟ್ಸ್‌

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2024, 18:18 IST
Last Updated 9 ಫೆಬ್ರುವರಿ 2024, 18:18 IST
   

ಕೊಲ್ಕತ್ತ: ಪಾರ್ಟಿಕ್ ದಹಿಯಾ (13) ಮತ್ತು ರಾಕೇಶ್ ಸುಂಗ್ರೋಯಾ (11) ಅವರ ಆಮೋಘ ರೈಡಿಂಗ್‌ ಬಲದಿಂದ ಗುಜರಾತ್‌ ಜೈಂಟ್ಸ್‌ ತಂಡವು ಶುಕ್ರವಾರ ಪ್ರೊ ಕಬಡ್ಡಿ ಲೀಗ್‌ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ತಂಡವನ್ನು 41–32 ಪಾಯಿಂಟ್ಸ್‌ಗಳಿಂದ ಸೋಲಿಸಿದೆ. ಈ ಗೆಲುವಿನೊಂದಿಗೆ ಜೈಂಟ್ಸ್ ತಂಡ ಪ್ಲೇ ಆಫ್‌ ಸನಿಹ ಬಂದಿದೆ.

ಇಲ್ಲಿನ ನೇತಾಜಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪ್ರಥರ್ಮಾಧದಲ್ಲಿ ಜೈಂಟ್ಸ್‌ ತಂಡವು 18–14ರಿಂದ ಮುನ್ನಡೆಯಲ್ಲಿತ್ತು. ವಿರಾಮದ ಬಳಿಕ ವೇಗದ ಆಟಕ್ಕೆ ಒತ್ತು ನೀಡಿ, ಮತ್ತಷ್ಟು ಪಾಯಿಂಟ್ಸ್‌ ಕಲೆ ಹಾಕಿದರು.  

ವಾರಿಯರ್ಸ್ ಪರ ನಿತಿನ್ ಕುಮಾರ್ (12) ಮತ್ತು ಮಣಿದರ್ ಸಿಂಗ್ (9) ಅಂಕ ಗಳಿಸಿ ಮಿಂಚಿದರು. 

ADVERTISEMENT

ಮತ್ತೊಂದು ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ ತಂಡವು ...ರಿಂದ ಯು.ಪಿ.ಯೋಧಾಸ್ ತಂಡವನ್ನು ಮಣಿಸಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.