ADVERTISEMENT

ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌ಗೆ ಸೋಲು 

ಪಿಟಿಐ
Published 18 ಫೆಬ್ರುವರಿ 2024, 20:50 IST
Last Updated 18 ಫೆಬ್ರುವರಿ 2024, 20:50 IST
<div class="paragraphs"><p>ಪ್ರೊ ಕಬಡ್ಡಿ ಲೀಗ್‌</p></div>

ಪ್ರೊ ಕಬಡ್ಡಿ ಲೀಗ್‌

   

ಪಂಚಕುಲಾ: ಪ್ರಮುಖ ರೇಡರ್‌ ಅಶು ಮಲಿಕ್ (17 ಅಂಕ) ಅವರ ಚಾಣಾಕ್ಷ ಆಟದಿಂದ ದಬಾಂಗ್ ಡೆಲ್ಲಿ ತಂಡ, ಭಾನುವಾರ ನಡೆದ ಪ್ರೊ ಕಬಡ್ಡಿ ಲೀಗ್ ಪಂದ್ಯದಲ್ಲಿ ಬೆಂಗಳೂರು ಬುಲ್ಸ್‌ ವಿರುದ್ಧ 46–38 ರಿಂದ ಗೆಲುವು ದಾಖಲಿಸಿತು. 

ಚುರುಕಾದ ದಾಳಿ ನಡೆಸಿದ ಅಶು ಎದುರಾಳಿಗಳನ್ನು ಕಟ್ಟಿ ಹಾಕಿದರು. ಅವರೊಂದಿಗೆ ಯೋಗೇಶ್ ದಹಿಯಾ ಅವರು 8 ಅಂಕ ಗಳಿಸಿದರು. ಆರಂಭದಿಂದಲೂ ಉತ್ತಮ ಆಟವಾಡಿದ ದಬಾಂಗ್ ತಂಡ, ವಿರಾಮದ ಬಳಿಕವೂ ಮೇಲುಗೈ ಸಾಧಿಸಿತು. ಬುಲ್ಸ್ ಪರ ಸುಶೀಲ್ 11 ಅಂಕ ಗಳಿಸಿದ ತಂಡದ ಹೋರಾಟದಲ್ಲಿ ಮಿಂಚಿದರು. 

ADVERTISEMENT

ಮತ್ತೊಂದು ಪಂದ್ಯದಲ್ಲಿ ತಮಿಳ್ ತಲೈವಾಸ್ 74–37 ರಿಂದ ಬೆಂಗಾಲ್ ವಾರಿಯರ್ಸ್ ವಿರುದ್ಧ ಜಯಗಳಿಸಿತು. ತಲೈವಾಸ್ ಪರ ವಿಶಾಲ್ ಚಾಹಲ್ 19, ನರೇಂದ್ರ ಹೋಶಿಯಾರ್ 17 ಅಂಕ ಗಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.