ADVERTISEMENT

ಪ್ರೊ ವಾಲಿಬಾಲ್‌ ಲೀಗ್‌: ಹೊಸತನದ ಹೆಜ್ಜೆ...

ಜಿ.ಶಿವಕುಮಾರ
Published 27 ಜನವರಿ 2019, 19:30 IST
Last Updated 27 ಜನವರಿ 2019, 19:30 IST
ವಾಲಿಬಾಲ್ ಆಟಗಾರರು
ವಾಲಿಬಾಲ್ ಆಟಗಾರರು   

ಭಾರತದಲ್ಲಿ ಈಗ ಲೀಗ್‌ಗಳ ಪರ್ವ ಶುರು ವಾಗಿದೆ. ಭಾರತ ಕ್ರಿಕೆಟ್‌ ನಿಯಂತ್ರಣ ಮಂಡ ಳಿಯ (ಬಿಸಿಸಿಐ) ‘ಕನಸಿನ ಕೂಸು’ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ (ಐಪಿಎಲ್‌) ಯಶಸ್ಸು, ಹಲವು ಕ್ರೀಡೆಗಳಿಗೆ ಪ್ರೇರಣೆಯಾಗಿದೆ. ಇದರ ಪರಿಣಾಮ ಐಎಸ್‌ಎಲ್‌, ಪ್ರೊ ಕಬಡ್ಡಿ, ಪ್ರೊ ಬ್ಯಾಡ್ಮಿಂಟನ್‌, ಪ್ರೊ ಕುಸ್ತಿ ಹೀಗೆ ಹಲವು ಲೀಗ್‌ಗಳು ಹುಟ್ಟಿಕೊಂಡಿವೆ. ಇವು ಆಯಾ ಕ್ರೀಡೆಗಳನ್ನು ‘ಶ್ರೀಮಂತ’ ಗೊಳಿಸಿದ್ದು, ಅಭಿ ಮಾನಿಗಳಿಗೂ ಮನರಂಜನೆಯ ರಸದೌತಣ ಉಣಬಡಿಸಿವೆ. ಇವುಗಳ ಸಾಲಿಗೆ ಈಗ ಮತ್ತೊಂದು ಲೀಗ್‌ ಸೇರ್ಪಡೆಗೊಳ್ಳುತ್ತಿದೆ. ಅದುವೇ ಪ್ರೊ ವಾಲಿಬಾಲ್‌.

ದೇಶದ ಎಲ್ಲಾ ಭಾಗಗಳಿಗೂ ವಾಲಿಬಾಲ್‌ನ ಕಂಪು ಪಸರಿಸುವ ಮತ್ತು ಈ ಕ್ರೀಡೆಯ ಬೇರುಗಳನ್ನು ಇನ್ನಷ್ಟು ಆಳಕ್ಕಿಳಿಸುವ ಸದು ದ್ದೇಶದೊಂದಿಗೆ ಭಾರತ ವಾಲಿಬಾಲ್ ಫೆಡ ರೇಷನ್‌ (ವಿಎಫ್‌ಐ) ಇದನ್ನು ಆರಂಭಿಸಿದೆ. ಈ ಕೈಂಕರ್ಯಕ್ಕೆ ಬೇಸ್‌ಲೈನ್‌ ವೆಂಚರ್ಸ್‌ ಕೂಡಾ ಕೈಜೋಡಿಸಿದೆ.

ಅಮೆರಿಕ, ಬ್ರೆಜಿಲ್‌, ಇಟಲಿ, ಪೋಲೆಂಡ್‌, ರಷ್ಯಾ ಮತ್ತು ಕೆನಡಾ ತಂಡಗಳು ವಾಲಿಬಾಲ್‌ನ ‌ಶಕ್ತಿ ಕೇಂದ್ರಗಳಾಗಿವೆ. ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಈ ತಂಡಗಳಿಗೆ ಸರಿಸಾಟಿಯಾಗಿ ನಿಲ್ಲುವ ಮಟ್ಟಿಗೆ ಭಾರತ ಇನ್ನೂ ಬೆಳೆದಿಲ್ಲ. ಫೆಡರೇಷನ್‌ ಇಂಟರ್‌ನ್ಯಾಷನಲ್‌ ಡಿ ವಾಲಿ ಬಾಲ್‌ (ಎಫ್‌ಐವಿಬಿ) ಆಯೋಜಿಸುವ ವಿಶ್ವ ಚಾಂಪಿಯನ್‌ಷಿಪ್‌ ಸೇರಿದಂತೆ ಹಲವು ಟೂರ್ನಿಗಳ ಮೇಲೆ ಬೆಳಕು ಚೆಲ್ಲಿದರೆ ಇದು ಮನದಟ್ಟಾಗುತ್ತದೆ.

ADVERTISEMENT

69 ವರ್ಷಗಳ ಇತಿಹಾಸವಿರುವ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಭಾರತಕ್ಕೆ ಪದಕ ಕೈಗೆಟುಕದಾಗಿದೆ. 1952ರ ಆಗಸ್ಟ್‌ನಲ್ಲಿ ಸೋವಿಯತ್‌ ಯೂನಿಯನ್‌ನಲ್ಲಿ ನಡೆದಿದ್ದ ಕೂಟದಲ್ಲಿ ಎಂಟನೇ ಸ್ಥಾನ ಪಡೆದಿದ್ದೇ ತಂಡದ ಇದುವರೆಗಿನ ಶ್ರೇಷ್ಠ ಸಾಧನೆ. ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲೂ ಭಾರತದ ಸಾಧನೆ ಅಷ್ಟಕಷ್ಟೆ.

ಫೆಡರೇಷನ್‌ಗಳಲ್ಲಿನ ಆಂತರಿಕ ಕಲಹ, ಆಯಕಟ್ಟಿನ ಹುದ್ದೆಗಳಲ್ಲಿರುವವರ ನಿರ್ಲಕ್ಷ್ಯ ಧೋರಣೆಯಿಂದಾಗಿ ಅಳಿವಿನ ಅಂಚಿನತ್ತ ಸಾಗುತ್ತಿರುವ ಈ ಕ್ರೀಡೆಗೆ ಪಿವಿಎಲ್‌ ಹೊಸ ಮೆರುಗು ನೀಡುವ ಆಶಾಭಾವ ವಾಲಿಬಾಲ್‌ ಪ್ರಿಯರಲ್ಲಿ ಮೂಡಿದೆ.

ನಮ್ಮವರಿಗೆ ಲಾಭ ಹೆಚ್ಚು
ಅಮೆರಿಕದ ಡೇವಿಡ್‌ ಲೀ, ಪಾಲ್‌ ಲಾಟ್ಮನ್‌, ಕೆನಡಾದ ರೂಡಿ ವರ್ಹೋಫ್‌ ಅವರಂತಹ ದಿಗ್ಗಜರು ಪಿವಿಎಲ್‌ನಲ್ಲಿ ಕಣಕ್ಕಿಳಿಯಲಿದ್ದಾರೆ. ಅವರ ಅಭ್ಯಾಸ ಕ್ರಮ, ಪಂದ್ಯಕ್ಕೂ ಮುನ್ನ ಸಜ್ಜಾಗುವ ರೀತಿ, ಸಂಕಷ್ಟದ ಸನ್ನಿವೇಶದಲ್ಲಿ ಒತ್ತಡವನ್ನು ಮೀರಿ ನಿಲ್ಲುವ ಕಲೆ, ಆಹಾರ ಕ್ರಮ, ಫಿಟ್‌ನೆಸ್‌ ಕಾಪಾಡಿಕೊಳ್ಳಲು ಅನುಸರಿಸುವ ತಂತ್ರ ಹೀಗೆ ಅನೇಕ ವಿಷಯಗಳನ್ನು ಹತ್ತಿರದಿಂದ ನೋಡಿ ಕಲಿಯುವ ಅವಕಾಶ ಈ ಲೀಗ್‌ನಿಂದ ನಮ್ಮ ಆಟಗಾರರಿಗೆ ಸಿಗಲಿದೆ. ಅವುಗಳನ್ನು ಮೈಗೂಡಿಸಿಕೊಂಡು ಸಾಮರ್ಥ್ಯ ವೃದ್ಧಿಸಿಕೊಳ್ಳಲು ಯುವ ಆಟಗಾರರಿಗೆ ಇದು ನೆರವಾಗಲಿದೆ.

ಈ ಲೀಗ್‌ನಿಂದ ಭಾರತದ ಆಟಗಾರರು ಲಕ್ಷಾಧೀಶರಾಗಿದ್ದಾರೆ. ರಂಜೀತ್‌ ಸಿಂಗ್‌ ಅವರು ಈ ಬಾರಿಯ ಹರಾಜಿನಲ್ಲಿ ಅತಿ ಹೆಚ್ಚು (₹13 ಲಕ್ಷ) ಮೊತ್ತ ಪಡೆದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 21 ವರ್ಷದೊಳಗಿನ ವಯೋಮಿತಿಯ ಭಾರತದ ಇಬ್ಬರು ಆಟಗಾರರನ್ನು ಎಲ್ಲಾ ತಂಡಗಳು ಖರೀದಿಸಬೇಕು ಎಂದು ವಿಎಫ್‌ಐ ಸೂಚಿಸಿದೆ. ಇದು ಕ್ರೀಡೆಯ ಬೆಳವಣಿಗೆಗೆ ಪೂರಕವಾಗಿದೆ.

ಟೂರ್ನಿಯ ಮಾದರಿ
ಟೂರ್ನಿಯು ರೌಂಡ್‌ ರಾಬಿನ್‌ ಲೀಗ್‌ ಮಾದರಿಯಲ್ಲಿ ನಡೆಯಲಿದೆ. ಒಟ್ಟು 18 ಪಂದ್ಯಗಳ ಪೈಕಿ 12 ಪಂದ್ಯಗಳು ಕೊಚ್ಚಿಯ (ಮೊದಲ ಲೆಗ್‌) ರಾಜೀವ್‌ ಗಾಂಧಿ ಕ್ರೀಡಾಂಗಣದಲ್ಲಿ ಆಯೋಜನೆಯಾಗಿವೆ.

ಎರಡು ಸೆಮಿಫೈನಲ್‌ ಮತ್ತು ಫೈನಲ್‌ ಸೇರಿದಂತೆ ಒಟ್ಟು ಆರು ಪಂದ್ಯಗಳು ಚೆನ್ನೈಯ ಜವಾಹರಲಾಲ್‌ ನೆಹರೂ ಕ್ರೀಡಾಂಗಣದಲ್ಲಿ ನಿಗದಿಯಾಗಿವೆ. ಭಾರತದ ಬ್ಯಾಡ್ಮಿಂಟನ್‌ ಆಟಗಾರ್ತಿ ಪಿ.ವಿ.ಸಿಂಧು ಲೀಗ್‌ನ ‍ಪ್ರಚಾರ ರಾಯಭಾರಿಯಾಗಿದ್ದಾರೆ.

ಬೆಂಗಳೂರಿನ ತಂಡ ಇಲ್ಲ
ಲೀಗ್‌ನಲ್ಲಿ ಬೆಂಗಳೂರಿನ ತಂಡ ಇಲ್ಲ. ಆದರೆ ಅಶ್ವಲ್‌ ರೈ, ಎ.ಕಾರ್ತಿಕ್‌ ಮತ್ತು ಹರಿಪ್ರಸಾದ್‌ ಸೇರಿದಂತೆ ಅನೇಕ ಆಟಗಾರರು ವಿವಿಧ ತಂಡಗಳಲ್ಲಿ ಆಡುತ್ತಿದ್ದಾರೆ. ಕರ್ನಾಟಕ ವಾಲಿಬಾಲ್‌ ತಂಡದ ಮುಖ್ಯ ಕೋಚ್‌ ಕೆ.ಆರ್‌.ಲಕ್ಷ್ಮೀನಾರಾಯಣ್‌ ಅವರು ಯು ಮುಂಬಾ ವಾಲಿ ತಂಡದ ತರಬೇತುದಾರ ಮತ್ತು ಸಲಹೆಗಾರರಾಗಿ ನೇಮಕಗೊಂಡಿದ್ದಾರೆ.

‘ಈ ಬಾರಿ ಬೆಂಗಳೂರಿನ ತಂಡ ಲೀಗ್‌ನಲ್ಲಿ ಆಡುತ್ತಿಲ್ಲ. ಹೀಗಾಗಿ ನಮಗೂ ಬೇಸರವಾಗಿದೆ. ಮುಂದಿನ ಆವೃತ್ತಿಯಲ್ಲಿ ಖಂಡಿತವಾಗಿಯೂ ಬೆಂಗಳೂರಿನ ತಂಡ ಕಣಕ್ಕಿಳಿಯಲಿದೆ. ತಂಡವನ್ನು ಖರೀದಿಸುವ ಬಗ್ಗೆ ಈಗಾಗಲೇ ಮಾತುಕತೆ ನಡೆದಿದೆ’ ಎಂದು ಲಕ್ಷ್ಮೀನಾರಾಯಣ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಯಾವ ತಂಡದಲ್ಲಿ ಯಾರು?

ಕೊಚ್ಚಿ ಬ್ಲೂ ಸ್ಪೈಕರ್ಸ್‌

* ಅಟ್ಯಾಕರ್‌: ಎಸ್‌.ಪ್ರಭಾಕರನ್‌, ಆ್ಯಂಡ್ರೆಜ್‌ ಪ್ಯಾಟುಕ್‌, ಸುರೇಶ್‌ ಖೋಯಿವಾಲ್‌ ಮತ್ತು ಸುಜಯ್‌ ದತ್ತ.

* ಬ್ಲಾಕರ್‌: ಡೇವಿಡ್‌ ಲೀ, ಮುಜೀಬ್‌, ಪಿ.ರೋಹಿತ್‌.

* ಸೆಟ್ಟರ್‌: ಮೋಹನ್‌ ಉಕ್ರಪಾಂಡಿಯನ್‌, ಅಂಕುರ್‌ ಸಿಂಗ್‌.

* ಲಿಬೆರೊ: ಹರಿಪ್ರಸಾದ್‌.

* ಯುನಿವರ್ಸಲ್‌: ಮನು ಜೋಸೆಫ್‌, ಕೆ.ಪ್ರವೀಣ್‌ ಕುಮಾರ್‌.

ಬ್ಲಾಕ್‌ ಹಾಕ್ಸ್‌ ಹೈದರಾಬಾದ್‌

* ಅಟ್ಯಾಕರ್‌: ಅಲೆಕ್ಸ್‌ ಬಾಡರ್‌, ಅಮಿತ್‌ ಕುಮಾರ್‌, ರೋಹಿತ್‌ ಕುಮಾರ್‌, ಕಾರ್ಸನ್‌ ಕ್ಲಾರ್ಕ್‌ ಮತ್ತು ಚಿರಾಗ್‌.

* ಬ್ಲಾಕರ್‌: ಅಶ್ವಲ್‌ ರೈ, ಸೋನು ಕುಮಾರ್‌ ಜಾಖರ್‌, ಗುರಮ್‌ಪ್ರೀತ್ ಪಾಲ್‌ ಸಿಂಗ್‌.

* ಸೆಟ್ಟರ್‌: ನಂದಿ ಯಶವಂತ್ ಕುಮಾರ್‌, ಮುತ್ತು ಸಾಮಿ.

* ಲಿಬೆರೊ: ಕಮಲೇಶ್‌ ಖಾಟಿಕ್‌.

* ಯುನಿವರ್ಸಲ್‌: ಅಂಗುಮುತ್ತು.

ಚೆನ್ನೈ ಸ್ಪಾರ್ಟನ್ಸ್‌

* ಅಟ್ಯಾಕರ್‌: ನವೀನ್‌ ರಾಜ್‌ ಜೇಕಬ್‌, ವಿಬಿನ್‌ ಜಾರ್ಜ್‌, ಪಿರೈಸೂದನ್‌ ಮತ್ತು ರುಸ್ಕನ್ಸ್‌ ಸೊರೊಕಿನ್ಸ್‌.

* ಬ್ಲಾಕರ್‌: ಶೆಲ್ಟನ್‌ ಮೋಸಸ್‌, ಎ.ಭಾಗ್ಯರಾಜ್‌, ರೂಡಿ ವರ್ಹೋಫ್‌, ಜಿ.ಎಸ್‌.ಅಖಿನ್‌.

* ಸೆಟ್ಟರ್‌: ಕೆ.ಜೆ.ಕಪಿಲ್‌ ದೇವ್‌, ವಿ.ಹರಿಹರನ್‌.

* ಲಿಬೆರೊ: ಪಿ.ಪ್ರಭಾಕರನ್‌.

* ಯುನಿವರ್ಸಲ್‌: ಅಶ್ವಿನ್‌.

ಅಹಮದಾಬಾದ್‌ ಡಿಫೆಂಡರ್ಸ್‌

* ಅಟ್ಯಾಕರ್‌: ದಿಲೀಪ್‌ ಕೊಯಿವಾಲ್‌, ರಮಣ್‌ ಕುಮಾರ್‌, ಗಗನದೀಪ್‌ ಸಿಂಗ್‌ ಮತ್ತು ವಿಕ್ಟರ್‌ ಸ್ಯೊಸೇವ್‌.

* ಬ್ಲಾಕರ್‌: ವೈಷ್ಣವ್‌, ರಜತ್‌, ನೊವಿಕಾ ಜೆಲಿಕಾ

* ಸೆಟ್ಟರ್‌: ಪಿ.ಲಿಜಾಯ್‌ ರಾಬಿನ್‌, ರಂಜೀತ್‌ ಸಿಂಗ್‌

* ಲಿಬೆರೊ: ರಾಹುಲ್‌ ಗ್ರಾಕ್‌

* ಯುನಿವರ್ಸಲ್‌: ಸೈಯದ್‌ ಮುಬಾರಕ್‌ ಅಲಿ, ಗುರಿಂದರ್‌ ಸಿಂಗ್‌

ಕ್ಯಾಲಿಕಟ್‌ ಹೀರೋಸ್‌

* ಅಟ್ಯಾಕರ್‌: ಜೀತು, ಪಾಲ್‌ ಲಾಟ್ಮನ್‌, ಸಿ.ಅಜಿತ್‌ ಲಾಲ್‌ ಮತ್ತು ಗಗನ್‌ ಕುಮಾರ್‌.

* ಬ್ಲಾಕರ್‌: ಎ.ಕಾರ್ತಿಕ್‌, ಇಲೌನಿ ಗಾಂಪೌರೌ, ಎಲ್‌.ಎಂ.ಮನೋಜ್‌.

* ಸೆಟ್ಟರ್‌: ವಿಪುಲ್‌ ಕುಮಾರ್‌, ಸಂಜಯ್‌.

* ಲಿಬೆರೊ: ಸಿ.ಕೆ.ರತೀಶ್‌

* ಯುನಿವರ್ಸಲ್‌: ಜೆರೋಮ್‌ ವಿನೀತ್‌, ನವೀನ್‌ ಕುಮಾರ್‌.

ಯು ಮುಂಬಾ ವಾಲಿ

* ಅಟ್ಯಾಕರ್‌: ನಿಕೋಲಸ್‌ ಡೆಲ್‌ ಬಿಯಾಂಕೊ, ಪಂಕಜ್‌ ಶರ್ಮಾ, ಹರ್ದೀಪ್‌ ಸಿಂಗ್‌ ಮತ್ತು ಟಾಮಿಸ್ಲಾವ್‌

ಕ್ಯಾಸೊವಿಚ್‌

* ಬ್ಲಾಕರ್‌: ಇ.ಜೆ.ಜಾನ್ ಜೋಸೆಫ್‌, ದೀಪೇಶ್‌ ಸಿನ್ಹಾ ಮತ್ತು ಪ್ರಿನ್ಸ್‌.

* ಸೆಟ್ಟರ್‌: ಸಕ್ಲೈನ್‌ ತಾರಿಕ್‌, ಪ್ರಶಾಂತ್‌ ಸರೋಹ.

* ಲಿಬೆರೊ: ಅಕ್ಷಯ್‌ ಕಾಪ್ಟ.

* ಯುನಿವರ್ಸಲ್‌: ವಿನೀತ್‌ ಕುಮಾರ್‌, ಶುಭಂ ಚೌಧರಿ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.