ADVERTISEMENT

ಅಮೆರಿಕ ಓಪನ್ ಬ್ಯಾಡ್ಮಿಂಟನ್‌: ಸಿಂಧುಗೆ ಸೋಲು, ನಾಲ್ಕರ ಘಟ್ಟಕ್ಕೆ ಲಕ್ಷ್ಯ ಸೇನ್‌

ಪಿಟಿಐ
Published 15 ಜುಲೈ 2023, 12:30 IST
Last Updated 15 ಜುಲೈ 2023, 12:30 IST
ಲಕ್ಷ್ಯ ಸೇನ್‌
ಲಕ್ಷ್ಯ ಸೇನ್‌   

ಕೌನ್ಸಿಲ್‌ ಬ್ಲಫ್ಸ್‌ (ಅಮೆರಿಕ): ಭಾರತದ ಪ್ರಮುಖ ಆಟಗಾರ್ತಿ ಪಿ.ವಿ.ಸಿಂಧು ಅಮೆರಿಕ ಓಪನ್‌ ಸೂಪರ್‌ 300 ಬ್ಯಾಡ್ಮಿಂಟನ್‌ ಟೂರ್ನಿಯ ಕ್ವಾರ್ಟರ್‌ಫೈನಲ್‌ನಲ್ಲಿ ಹೊರಬಿದ್ದರು. ಆದರೆ ಲಕ್ಷ್ಯ ಸೇನ್‌ ಪುರುಷರ ವಿಭಾಗದಲ್ಲಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟರು.

ಮೂರನೇ ಶ್ರೇಯಾಂಕದ ಲಕ್ಷ್ಯ, ಶುಕ್ರವಾರ ರಾತ್ರಿ ನಡೆದ ಕ್ವಾರ್ಟರ್‌ಫೈನಲ್‌ನಲ್ಲಿ 21–10, 21–17 ರಲ್ಲಿ ಸ್ವದೇಶದ ಎಸ್‌.ಶಂಕರ್‌ ಮುತ್ತುಸಾಮಿ ಸುಬ್ರಮಣಿಯನ್‌ ಅವರನ್ನು ಹಿಮ್ಮೆಟ್ಟಿಸಿದರು.

ಸೆಮಿಫೈನಲ್‌ನಲ್ಲಿ ಭಾರತದ ಆಟಗಾರ ಎರಡನೇ ಶ್ರೇಯಾಂಕ ಪಡೆದಿರುವ ಚೀನಾದ ಆಟಗಾರ ಲಿ ಶಿ ಫೆಂಗ್‌ ಅವರನ್ನು ಎದುರಿಸಲಿದ್ದಾರೆ. ಫೆಂಗ್‌ ಇನ್ನೊಂದು ಕ್ವಾರ್ಟರ್‌ಫೈನಲ್‌ನಲ್ಲಿ ತೈವಾನ್‌ನ ಸು ಲಿ ಯಾಂಗ್ ಅವರನ್ನು 21–14, 21–16 ರಿಂದ ಸೋಲಿಸಿದರು.

ADVERTISEMENT

ಮಹಿಳೆಯರ ವಿಭಾಗದಲ್ಲಿ ವಿಶ್ವದ 12ನೇ ಕ್ರಮಾಂಕದ ಆಟಗಾರ್ತಿ ಹಾಗೂ ಈ ಟೂರ್ನಿಯಲ್ಲಿ ಮೂರನೇ ಶ್ರೇಯಾಂಕದ ಪಡೆದಿರುವ ಸಿಂಧು 20–22, 13–21 ರಲ್ಲಿ ಚೀನಾದ ಗಾವೊ ಫಾಂಗ್‌ ಜೀ ಎದುರು ಪರಾಭವಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.