ADVERTISEMENT

ಬಾಕ್ಸಿಂಗ್‌: ರಚಿತ್ ತರುಣ್‌ಗೆ ಚಿನ್ನದ ಪದಕ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2025, 12:42 IST
Last Updated 10 ನವೆಂಬರ್ 2025, 12:42 IST
ಕರ್ನಾಟಕ ಒಲಿಂಪಿಕ್ ಸಂಸ್ಥೆ ಅಧ್ಯಕ್ಷ ಕೆ.ಗೋವಿಂದರಾಜ್‌ ಅವರು ರಚಿತ್‌ ತರುಣ್‌ಗೆ ಪದಕ ಪ್ರದಾನ ಮಾಡಿದರು.
ಕರ್ನಾಟಕ ಒಲಿಂಪಿಕ್ ಸಂಸ್ಥೆ ಅಧ್ಯಕ್ಷ ಕೆ.ಗೋವಿಂದರಾಜ್‌ ಅವರು ರಚಿತ್‌ ತರುಣ್‌ಗೆ ಪದಕ ಪ್ರದಾನ ಮಾಡಿದರು.   

ಬೆಂಗಳೂರು: ನಗರದ ರಚಿತ್ ತರುಣ್ ಕೆ. ಅವರು ಕರ್ನಾಟಕ ಮಿನಿ ಗೇಮ್ಸ್‌ನಲ್ಲಿ ಬಾಲಕರ 58ರಿಂದ 60 ಕೆಜಿ ವಿಭಾಗದೊಳಗಿನವರ ಬಾಕ್ಸಿಂಗ್‌ ಸ್ಪರ್ಧೆಯಲ್ಲಿ ಚಿನ್ನದ ಸಾಧನೆ ಮಾಡಿದರು. 

ಸತತ ಮೂರು ಪಂದ್ಯಗಳಲ್ಲಿ ಪ್ರಾಬಲ್ಯ ಸಾಧಿಸಿದ ರಚಿತ್‌ ಅವರು ಫೈನಲ್‌ನಲ್ಲಿ ಆರ್‌ಎಸ್‌ಸಿ ಮೂಲಕ ಗೆಲುವು ಸಾಧಿಸಿ, ಚಿನ್ನದ ಪದಕ ಗೆದ್ದಿದ್ದಾರೆ. ಬೆಂಗಳೂರು ನಗರ ತಂಡದ ಬಾಕ್ಸರ್‌ಗಳು ಕೂಟದಲ್ಲಿ ಮಿಂಚಿದರು.

ಕರ್ನಾಟಕ ಒಲಿಂಪಿಕ್ ಸಂಸ್ಥೆ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಅಭಿವೃದ್ಧಿ ಇಲಾಖೆಯ ಸಹಭಾಗಿತ್ವದಲ್ಲಿ ಕ್ರೀಡಾಕೂಟ ಈಚೆಗೆ ನಡೆಯಿತು. ಬಾಕ್ಸಿಂಗ್ ಸ್ಪರ್ಧೆಯನ್ನು ಬೆಂಗಳೂರಿನ ಕಂಠೀರವ ಕ್ರೀಡಾಂಗಣದ ಬಾಕ್ಸಿಂಗ್ ಹಾಲ್‌ನಲ್ಲಿ ನಡೆಸಲಾಯಿತು.

ADVERTISEMENT

ಕರ್ನಾಟಕ ಒಲಿಂಪಿಕ್ ಸಂಸ್ಥೆ ಅಧ್ಯಕ್ಷ ಕೆ.ಗೋವಿಂದರಾಜ್‌ ಅವರು ರಚಿತ್‌ಗೆ ಪದಕ ಪ್ರದಾನ ಮಾಡಿದರು. ಕೆಎಬಿಎ ಅಧ್ಯಕ್ಷ ಮಂಜೇಗೌಡ, ಬಿಎಫ್‌ಐ ಪ್ರಧಾನ ಕಾರ್ಯದರ್ಶಿ ಸಾಯಿ ಸತೀಶ್, ಬಿ. ಧನಂಜಯನ್ ಉಪಸ್ಥಿತರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.