ADVERTISEMENT

ಎಂಟರಘಟ್ಟಕ್ಕೆ ಬೋಪಣ್ಣ– ರಾಮ್‌ಕುಮಾರ್‌

ಅಡಿಲೇಡ್ ಇಂಟರ್‌ನ್ಯಾಷನಲ್‌ 1 ಎಟಿಪಿ ಟೂರ್ನಿ

ಪಿಟಿಐ
Published 5 ಜನವರಿ 2022, 12:21 IST
Last Updated 5 ಜನವರಿ 2022, 12:21 IST
ರಾಮಕುಮಾರ್ ರಾಮನಾಥನ್‌– ಪ್ರಜಾವಾಣಿ ಸಂಗ್ರಹ ಚಿತ್ರ
ರಾಮಕುಮಾರ್ ರಾಮನಾಥನ್‌– ಪ್ರಜಾವಾಣಿ ಸಂಗ್ರಹ ಚಿತ್ರ   

ಅಡಿಲೇಡ್‌: ವೀರೋಚಿತ ಹೋರಾಟದಲ್ಲಿ ಗೆದ್ದ ಭಾರತದ ರೋಹನ್ ಬೋಪಣ್ಣ ಮತ್ತು ರಾಮಕುಮಾರ್ ರಾಮನಾಥನ್ ಜೋಡಿಯು ಅಡಿಲೇಡ್‌ ಇಂಟರ್‌ನ್ಯಾಷನಲ್‌ 1 ಎಟಿಪಿ ಟೂರ್ನಿಯ ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.

ಬುಧವಾರ ನಡೆದ ಪ್ರೀಕ್ವಾರ್ಟರ್‌ಫೈನಲ್‌ನಲ್ಲಿ ರೋಹನ್‌–ರಾಮಕುಮಾರ್‌ 6-7(4), 7-6(3), 10-4ರಿಂದ ಅಮೆರಿಕದ ನೇಥನಿಯಲ್ ಲ್ಯಾಮೊನ್ಸ್ ಮತ್ತು ಜಾಕ್ಸನ್ ವಿಥ್ರೊ ಅವರಿಗೆ ಆಘಾತ ನೀಡಿದರು.

ಮೊದಲ ಸೆಟ್‌ಅನ್ನು ಕೈಚೆಲ್ಲಿದ ಭಾರತದ ಜೋಡಿಯು ಛಲ ಕಳೆದುಕೊಳ್ಳದೆ ಎರಡು ಮತ್ತು ಮೂರನೇ ಸೆಟ್‌ಗಳಲ್ಲಿ ಪಾರಮ್ಯ ಮೆರೆದರು.

ADVERTISEMENT

ಎಂಟರಘಟ್ಟದ ಪಂದ್ಯದಲ್ಲಿ ರೋಹನ್‌–ರಾಮಕುಮಾರ್‌ ಅವರಿಗೆ, ಫ್ರಾನ್ಸ್‌– ಮೊನಾಕೊ ಜೋಡಿ ಬೆಂಜಮಿನ್‌ ಬೊಂಜಿ– ಹ್ಯೂಗೊ ನಿಸ್‌ ಮತ್ತು ಬೆಲ್ಜಿಯಂನ ಸ್ಯಾಂಡರ್ ಗಿಲ್‌–ಜೊರಾನ್‌ ಲಿಜೆನ್ ನಡುವಣ ಪ್ರೀಕ್ವಾರ್ಟರ್‌ಫೈನಲ್‌ ಪಂದ್ಯದ ವಿಜೇತರು ಎದುರಾಗಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.