ADVERTISEMENT

ಅರ್ಜೆಂಟೀನಾಕ್ಕೆ ತೆರಳಿದ ಮಹಿಳಾ ಹಾಕಿ ತಂಡ

ಪಿಟಿಐ
Published 3 ಜನವರಿ 2021, 23:23 IST
Last Updated 3 ಜನವರಿ 2021, 23:23 IST
ರಾಣಿ ರಾಂಪಾಲ್‌
ರಾಣಿ ರಾಂಪಾಲ್‌   

ನವದೆಹಲಿ: ರಾಣಿ ರಾಂಪಾಲ್ ನೇತೃತ್ವದ ಭಾರತ ಮಹಿಳಾ ಹಾಕಿ ತಂಡವು ನಾಲ್ಕು ಪಂದ್ಯಗಳ ಸರಣಿಯನ್ನು ಆಡಲು ಭಾನುವಾರ ಅರ್ಜೆಂಟೀನಾಕ್ಕೆ ತೆರಳಿತು. ಕೋವಿಡ್‌–19 ಪಿಡುಗಿನ ಹಿನ್ನೆಲೆಯಲ್ಲಿ ಉಂಟಾದ ಸುಮಾರು ಒಂದು ವರ್ಷದ ಬಿಡುವಿನ ಬಳಿಕ ಭಾರತ ತಂಡ ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಪಾಲ್ಗೊಳ್ಳಲಿದೆ.

ಕೋವಿಡ್‌ ಬಿಡುವಿನ ವೇಳೆಯಲ್ಲಿ ಮಹಿಳಾ ಹಾಕಿ ತಂಡವು ಬೆಂಗಳೂರಿನಲ್ಲಿರುವ ಭಾರತ ಕ್ರೀಡಾ ಪ್ರಾಧಿಕಾರದಲ್ಲಿ (ಸಾಯ್‌) ನಡೆದ ರಾಷ್ಟ್ರೀಯ ಶಿಬಿರದಲ್ಲಿ ತರಬೇತಿ ನಡೆಸಿತ್ತು.

ಭಾರತ ಮಹಿಳಾ ತಂಡವು ವಿಶ್ವದ ಎರಡನೇ ರ‍್ಯಾಂಕಿನ ತಂಡ ಅರ್ಜೆಂಟೀನಾ ವಿರುದ್ಧ ಜನೆವರಿ 26, 28, 30 ಹಾಗೂ 31ರಂದು ಪಂದ್ಯಗಳನ್ನು ಆಡಲಿದೆ. ಅದಕ್ಕೂ ಮೊದಲು ಅರ್ಜೆಂಟೀನಾ ಬಿ ಹಾಗೂ ಜೂನಿಯರ್ ತಂಡಗಳ ಎದುರು ಭಾರತ ತಲಾ ಎರಡು ಪಂದ್ಯಗಳಲ್ಲಿ ಕಣಕ್ಕಿಳಿಯಲಿದೆ.

ADVERTISEMENT

‘ಮತ್ತೆ ಅಂತರರಾಷ್ಟ್ರೀಯ ಪ್ರವಾಸ ಕೈಗೊಳ್ಳುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಪಂದ್ಯದ ಕೌಶಲಗಳ ಕುರಿತು ತರಬೇತಿ ನಡೆಸಿದ್ದು, ಅರ್ಜೆಂಟೀನಾ ಎದುರಿನ ಪಂದ್ಯಗಳಲ್ಲಿ ಅದನ್ನು ಅಳವಡಿಸಿಕೊಳ್ಳಲಿದ್ದೇವೆ‘ ಎಂದು ರಾಣಿ ರಾಂಪಾಲ್ ಹೇಳಿದ್ದಾರೆ.

ಅರ್ಜೆಂಟೀನಾಕ್ಕೆ ತೆರಳುವ 72 ಗಂಟೆಗಳ ಮೊದಲು ಇಂಡೀ ತಂಡಕ್ಕೆ ಕೋವಿಡ್‌–19 ಪರೀಕ್ಷೆ ನಡೆಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.