ರಿಫಾ, ಬಹರೇನ್: ಭಾರತದ ರಂಜನಾ ಯಾದವ್ ಅವರು ಇಲ್ಲಿ ನಡೆದ ಏಷ್ಯನ್ ಯೂತ್ ಗೇಮ್ಸ್‌ನಲ್ಲಿ ನಡೆದ ಅಥ್ಲೆಟಿಕ್ಸ್‌ನಲ್ಲಿ ಬಾಲಕಿಯರ ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿದರು.
ಬಹರೇನ್ ನ್ಯಾಷನಲ್ ಸ್ಟೇಡಿಯಂನಲ್ಲಿ ಗುರುವಾರ ನಡೆದ ಬಾಲಕಿಯರ 5000 ಮೀಟರ್ಸ್ ಓಟದಲ್ಲಿ ರಂಜನಾ (ಕಾಲ: 23ನಿಮಿಷ, 25.88ಸೆಕೆಂಡು) ಎರಡನೇ ಸ್ಥಾನ ಗಳಿಸಿದರು. ಚೀನಾದ ಲಿಯು ಶಿಯಿ ಅವರು ಚಿನ್ನದ ಪದಕ ಜಯಿಸಿದರು. ಅವರು 24ನಿಮಿಷ, 15.27ಸೆಕೆಂಡುಗಳಲ್ಲಿ ಮೊದಲಿಗರಾಗಿ ಗುರಿ ಮೆಟ್ಟಿದರು. ಕೊರಿಯಾದ ಜಿಯಾಂಗ್ ಚೆಯೆಒನ್ (25ನಿ,26.93ಸೆ) ಕಂಚು ಪಡೆದರು.
ಈ ಕೂಟದ ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಇದು ಮೊದಲ ಪದಕವಾಗಿದೆ. ಭಾರತವು ಒಟ್ಟಾರೆ ಎರಡು ಬೆಳ್ಳಿ ಮತ್ತು ನಾಲ್ಕು ಕಂಚು ಜಯಿಸಿದೆ.
ಖುರಾಷ್‌ನಲ್ಲಿ ಒಂದು ಬೆಳ್ಳಿ, ಎರಡು ಕಂಚು ಮತ್ತು ಟೇಕ್ವಾಂಡೊನಲ್ಲಿ ಎರಡು ಕಂಚಿನ ಪದಕಗಳನ್ನು ಭಾರತದ ಕ್ರೀಡಾಪಟುಗಳು ಗೆದ್ದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.