ADVERTISEMENT

ವಿಶ್ವ ಜೂನಿಯರ್ ಕುಸ್ತಿ ಚಾಂಪಿಯನ್‌ಷಿಪ್‌: ಕಂಚಿನ ಪದಕದ ಸುತ್ತಿಗೆ ರವಿ ಮಲಿಕ್‌

ವಿಶ್ವ ಜೂನಿಯರ್ ಕುಸ್ತಿ ಚಾಂಪಿಯನ್‌ಷಿಪ್‌

ಪಿಟಿಐ
Published 21 ಆಗಸ್ಟ್ 2021, 14:14 IST
Last Updated 21 ಆಗಸ್ಟ್ 2021, 14:14 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಯೂಫಾ, ರಷ್ಯಾ : ಭಾರತದ ರವಿ ಮಲಿಕ್ ಅವರು ವಿಶ್ವ ಜೂನಿಯರ್ ಕುಸ್ತಿ ಚಾಂಪಿಯನ್‌ಷಿಪ್‌ನ ಗ್ರೀಕೊ ರೋಮನ್ ವಿಭಾಗದಲ್ಲಿ ಕಂಚಿನ ಪದಕದ ಸುತ್ತಿಗೆ ಪ್ರವೇಶಿಸಿದ್ದಾರೆ.

82 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ರವಿ ಮೊದಲ ಸುತ್ತಿನಲ್ಲಿ 6–0ಯಿಂದ ಈಸ್ಟೋನಿಯಾದ ರಾಬಿನ್‌ ಉಸ್ಪೆನ್‌ಸ್ಕಿ ಎದುರು ಗೆದ್ದರು. ಬಳಿಕ ಕಿರ್ಗಿಸ್ತಾನದ ಝೆನಿಶ್‌ ಹುಮ್ನಬೆಕೊಬ್ ಅವರನ್ನು 18–9ರಿಂದ ಮಣಿಸಿ ಸೆಮಿಫೈನಲ್‌ಗೆ ಕಾಲಿಟ್ಟರು.

ನಾಲ್ಕರ ಘಟ್ಟದ ಬೌಟ್‌ನಲ್ಲಿ ಅರ್ಮೆನೀಯಾದ ಕರೆನ್‌ ಖಚತ್ರಿಯನ್ ಎದುರು ರವಿ ಮುಗ್ಗರಿಸಿದರು. ಕರೆನ್‌ ತಾಂತ್ರಿಕ ಶ್ರೇಷ್ಠತೆಯ ಆಧಾರದಲ್ಲಿ ಗೆಲುವು ಸಾಧಿಸಿದರು.

ADVERTISEMENT

97 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ನರಿಂದರ್‌ ಚೀಮಾ ಎರಡು ಬೌಟ್‌ಗಳಲ್ಲಿ ಗೆದ್ದು ರಿಪೇಚ್‌ ಸುತ್ತಿನಲ್ಲಿ ಆಡಲು ಅವಕಾಶ ಪಡೆದಿದ್ದಾರೆ. ಕ್ವಾರ್ಟರ್‌ಫೈನಲ್‌ನಲ್ಲಿ ಅವರು ಬೆಲಾರಸ್‌ನ ಪಾವೆಲ್ ಹಿಂಚುಕ್‌ ಎದುರು ಸೋತರು. ಆದರೆ ‍ಪಾವೆಲ್ ಫೈನಲ್ ತಲು‍ಪಿದ್ದರಿಂದ ನರಿಂದರ್‌ ಸ್ಪರ್ಧೆಯಲ್ಲಿ ಉಳಿಯುವಂತಾಯಿತು.

ವಿಕಾಸ್‌ (72 ಕೆಜಿ) ಮತ್ತು ದೀಪಕ್ (77 ಕೆಜಿ) ಎರಡನೇ ಸುತ್ತುಗಳಲ್ಲಿ ಸೋತರೆ, ಅನೂಪ್‌ (55 ಕೆಜಿ), ವಿಕಾಸ್‌ (60 ಕೆಜಿ), ದೀಪಕ್‌ (67 ಕೆಜಿ), ಸೋನು (87 ಕೆಜಿ), ಪರ್ವೇಶ್‌ (130 ಕೆಜಿ) ಮೊದಲ ಹಣಾಹಣಿಗಳಲ್ಲೇ ನಿರಾಸೆ ಅನುಭವಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.