ನವದೆಹಲಿ: ಒಲಿಂಪಿಕ್ಸ್ ಹಾಗೂ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ವಿಜೇತರಾದ ಎಲೇನ್ ಥಾಂಪ್ಸನ್ ಹಾಗೂ ನೆಸ್ಟಾ ಕಾರ್ಟರ್ ಅವರ ತರಬೇತುದಾರ ಜೆರ್ರಿ ಲೀ ಹಾಲ್ನೆಸ್ ಅವರು ಭಾರತದ 400 ಮೀಟರ್ ವನಿತೆಯರ ತಂಡಕ್ಕೆ ಕೋಚ್ ಆಗಿ ನೇಮಕಗೊಂಡಿದ್ದಾರೆ.
‘ತಿರುವನಂತಪುರದ ನ್ಯಾಷನಲ್ ಸೆಂಟರ್ ಆಫ್ ಎಕ್ಸಲೆನ್ಸ್ ಕೇಂದ್ರದಲ್ಲಿ ತರಬೇತಿ ಪಡೆಯಲಿರುವ 400 ಮೀ. ಓಟ ಹಾಗೂ 400 ಮೀ. ಹರ್ಡಲ್ಸ್‌ನ ಮಹಿಳಾ ಅಥ್ಲೀಟ್‌ಗಳಿಗೆ ಅವರು ತರಬೇತಿ ನೀಡಲಿದ್ದಾರೆ’ ಎಂದು ಭಾರತ ಅಥ್ಲೆಟಿಕ್ಸ್‌ನ ಮುಖ್ಯ ಕೋಚ್ ರಾಧಾಕೃಷ್ಣನ್ ನಾಯರ್ ತಿಳಿಸಿದ್ದಾರೆ.
65 ವರ್ಷದ ಹಾಲ್ನೆಸ್ ಅವರ ಗುತ್ತಿಗೆಯು 2026ರವರೆಗೆ ಇದೆ. ಹಿಮಾ ದಾಸ್, ಶುಭಾ ವೆಂಕಟೇಸನ್ ರುಪಾಲ್, ಕಿರಣ್ ಪಹಲ್ ಹಾಗೂ ವಿದ್ಯಾ ರಾಮರಾಜ್ ಅವರಂಥ ಅಥ್ಲೀಟ್‌ಗಳು ಅವರಿಂದ ತರಬೇತಿ ಪಡೆಯಲಿದ್ದಾರೆ. ಭಾರತದ ವನಿತೆಯರ ತಂಡಕ್ಕೆ ಈವರೆಗೂ ಸ್ತಾಶುಕ್ ವಲೇರಿ ತರಬೇತುದಾರರಾಗಿದ್ದರು.
ಅಥ್ಲೆಟಿಕ್ಸ್‌ನಲ್ಲಿ ಹಾಲ್ನೆಸ್ ಅವರ ಸೇರ್ಪಡೆಯ ಬೆನ್ನಲ್ಲೇ, ಜಾವೆಲಿನ್ ಎಸೆತ ತಂಡಕ್ಕೆ ಕೋಚ್ ಆಗಿ ರಷ್ಯಾದ ಸರ್ಗಿ ಮಕರೋವ್ ಅಲೆಕ್ಸಾಂಡ್ರೊವಿಚ್ ಸೇರಿದ್ದಾರೆ. ಎರಡು ಒಲಿಂಪಿಕ್ಸ್ ಪದಕ ವಿಜೇತ ಭಾರತದ ನೀರಜ್ ಚೋಪ್ರಾ ಅವರು ತಮ್ಮ ಕೋಚ್ ಜಾನ್ ಝೆಲೆಂಝ್ಸಿ ಅವರಿಂದಲೇ ತರಬೇತಿ ಪಡೆಯಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.