ADVERTISEMENT

ಕಮ್ಯುನಿಟಿ ಕೋಚ್‌ ಕಾರ್ಯಕ್ರಮಕ್ಕೆ ಚಾಲನೆ

ಪಿಟಿಐ
Published 2 ಜೂನ್ 2020, 19:45 IST
Last Updated 2 ಜೂನ್ 2020, 19:45 IST
ಕಿರಣ್‌ ರಿಜಿಜು 
ಕಿರಣ್‌ ರಿಜಿಜು    

ನವದೆಹಲಿ:ದೇಶದ ವಿವಿಧ ಭಾಗಗಳ 15,000 ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ಕೋಚ್‌ಗಳಿಗೆ ಅಗತ್ಯ ತರಬೇತಿ ನೀಡುವ ಉದ್ದೇಶದಿಂದ ಆಯೋಜಿಸಿರುವ ಖೇಲೊ ಇಂಡಿಯಾ ಕಮ್ಯುನಿಟಿ ಕೋಚ್‌ ಡೆವಲಪ್‌ಮೆಂಟ್‌ ಕಾರ್ಯಕ್ರಮಕ್ಕೆ ಕೇಂದ್ರ ಕ್ರೀಡಾ ಸಚಿವ ಕಿರಣ್‌ ರಿಜಿಜು ಚಾಲನೆ ನೀಡಿದ್ದಾರೆ.

ಇದು ಒಟ್ಟು 25 ದಿನಗಳ ಕಾಲ ನಡೆಯಲಿದೆ.

‘ಶಾಲಾ ಹಂತದಿಂದಲೇ ನಾವು ಮಕ್ಕಳಲ್ಲಿ ಕ್ರೀಡೆಯ ಬಗ್ಗೆ ಒಲವು ಬೆಳೆಸಬೇಕಿದೆ. ಹಾಗಾದಲ್ಲಿ ಮಾತ್ರ ಭಾರತವು ಕ್ರೀಡಾ ಲೋಕದ ಶಕ್ತಿ ಕೇಂದ್ರವಾಗಿ ರೂಪುಗೊಳ್ಳಲು ಸಾಧ್ಯ. ಈ ಪ್ರಕ್ರಿಯೆಯಲ್ಲಿ ಕೋಚ್‌ಗಳು ಹಾಗೂ ದೈಹಿಕ ಶಿಕ್ಷಣ ಶಿಕ್ಷಕರ ಪಾತ್ರವೂ ಮಹತ್ವದ್ದಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಕಮ್ಯುನಿಟಿ ಕೋಚ್‌ ಡೆವಲಪ್‌ಮೆಂಟ್‌ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದು ರಿಜಿಜು ತಿಳಿಸಿದ್ದಾರೆ.

ADVERTISEMENT

‘ಫಿಟ್‌ನೆಸ್‌ ಕೇವಲ ಆಯ್ಕೆಯಾಗಬಾರದು. ಅದು ದೇಶದ ಪ್ರತಿಯೊಬ್ಬ ನಾಗರಿಕನ ಜೀವನದ ಅವಿಭಾಜ್ಯ ಅಂಗವಾಗಬೇಕು. ಇದನ್ನು ಗಮನದಲ್ಲಿಟ್ಟುಕೊಂಡು ನಾವು ಹಲವು ಯೋಜನೆಗಳನ್ನು ರೂ‍ಪಿಸುತ್ತಿದ್ದೇವೆ. ಭಾರತವನ್ನು ಸದೃಢ ರಾಷ್ಟ್ರವನ್ನಾಗಿಸಲು ಎಲ್ಲರೂ ಕೈಜೋಡಿಸಬೇಕು’ ಎಂದು ಅವರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.