ADVERTISEMENT

ಪುತ್ತೂರು: ಅಂತರರಾಜ್ಯ ಮಟ್ಟದ ಆಫ್‌ರೋಡ್ ರೇಸ್‌ 18ರಂದು

ಗುಡ್ಡಗಾಡು ಜೀಪ್‌ ರ‍್ಯಾಲಿ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2018, 18:18 IST
Last Updated 16 ನವೆಂಬರ್ 2018, 18:18 IST

ಪುತ್ತೂರು: ಮೂರು ವರ್ಷಗಳ ಹಿಂದೆ ಇಲ್ಲಿ ಅಸ್ತಿತ್ವಕ್ಕೆ ಬಂದ 21 ಆಫ್‌ರೋಡ್ ಕ್ಲಬ್ ವತಿಯಿಂದ ‘ಅಂತರರಾಜ್ಯ ಮಟ್ಟದ ಫೋರ್‌ವೀಲ್ ಜೀಪ್‌ಗಳ ಆಫ್‌ರೋಡ್ ರೇಸ್‌’ ಇದೇ 18ರಂದು ನಡೆಯಲಿದೆ.

‘ಕರ್ನಾಟಕ, ಗೋವಾ, ಕೇರಳ ರಾಜ್ಯಗಳಿಂದ 30ಕ್ಕೂ ಹೆಚ್ಚು ಆಫ್‌ರೋಡ್ ಸ್ಪರ್ಧಾಳುಗಳು ತಮ್ಮ ಜೀಪ್‌ಗಳೊಂದಿಗೆ ಪಾಲ್ಗೊಳ್ಳುವರು’ ಎಂದು ಕ್ಲಬ್‌ನ ಅಧ್ಯಕ್ಷ ಅಖಿಲ್ ನಾಯಕ್ ಶುಕ್ರವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಬೆಳಿಗ್ಗೆ 9 ಗಂಟೆಗೆ ಸಂಪ್ಯದಿಂದ ಈ ರೇಸ್‌ ಆರಂಭಗೊಳ್ಳಲಿದೆ. 13 ಕಿ.ಮೀ. ಮಾತ್ರ ಡಾಂಬರ್‌ ರಸ್ತೆ ಇದೆ. ಉಳಿದಂತೆ ಗುಡ್ಡಗಾಡು ಪ್ರದೇಶದಲ್ಲಿ ವಾಹನಗಳು ಸಾಗಲಿವೆ’ ಎಂದರು.

ADVERTISEMENT

ಕ್ರೀಡಾಪಟು, ಉದ್ಯಮಿ ವಿಶ್ವನಾಥ ನಾಯಕ್ ಮಾತನಾಡಿ, ‘ ಆಫ್‌ರೋಡ್ ವಾಹನ ಚಾಲನೆ ಕಲೆಯಾಗಿದ್ದು, ಅದರ ಚಾಲಕರು ಇತ್ತೀಚೆಗೆ ಕೊಡಗು ಮತ್ತು ಕೇರಳದಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಲ್ಲಿ ಪರಿಹಾರ ಕಾರ್ಯದಲ್ಲಿ ತಮ್ಮ ಸಾಹಸ ಮೆರೆದಿದ್ದಾರೆ. ಅಲ್ಲಿ ಜನರನ್ನು ರಕ್ಷಿಸಲು ಸಹಕಾರಿಯಾಯಿತು’ ಎಂದರು.

ರೇಸ್‌ ನಡೆಯುವ ಮಾರ್ಗ

ಆಫ್ರೋಡ್ ಓಟದಲ್ಲಿ ಪಾಲ್ಗೊಳ್ಳುವ ಜೀಪುಗಳು ಮುಕ್ರಂಪಾಡಿ, ಕುಂಜೂರು ಪಂಜ, ದೊಡ್ಡಡ್ಕ, ಕೃಷ್ಣಗಿರಿ, ಗ್ರಾಮಾಂತರ ಬಲ್ನಾಡು, ಬಂಗಾರಡ್ಕ, ಪರ್ಲಡ್ಕ ಮತ್ತು ಬೈಪಾಸ್ ಮೂಲಕ 25 ಕಿ.ಮೀ ಸಾಗಿ ಹಿಂತಿರುಗಿ ಸಂಪ್ಯ ತಲುಪಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.