ADVERTISEMENT

ಪೋಲ್ ವಾಲ್ಟ್: ರೋಸಿ ಮೀನಾಗೆ ಚಿನ್ನ

ಪಿಟಿಐ
Published 14 ಮೇ 2024, 17:41 IST
Last Updated 14 ಮೇ 2024, 17:41 IST
ರೋಸಿ ಮೀನಾ ಪಾಲ್‌ರಾಜ್
ರೋಸಿ ಮೀನಾ ಪಾಲ್‌ರಾಜ್    

ಭುವನೇಶ್ವರ (ಪಿಟಿಐ): ರಾಷ್ಟ್ರೀಯ ಫೆಡರೇಷನ್ ಕಪ್ ಸೀನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ ಮೂರನೇ ದಿನವಾದ ಮಂಗಳವಾರ ಮಹಿಳೆಯರ ಪೋಲ್ ವಾಲ್ಟ್ ಸ್ಪರ್ಧೆಯಲ್ಲಿ ರಾಷ್ಟ್ರೀಯ ದಾಖಲೆ ಹೊಂದಿರುವ ರೋಸಿ ಮೀನಾ ಪಾಲ್‌ರಾಜ್ 4.05 ಮೀಟರ್ ಎತ್ತರಕ್ಕೆ ಜಿಗಿದು ಚಿನ್ನ ಗೆದ್ದರು.

ತಮಿಳುನಾಡಿನ 26 ವರ್ಷದ ರೋಸಿ ಅವರ ಪ್ರಯತ್ನವು ಕಳೆದ ವರ್ಷ ಅವರು ಸ್ಥಾಪಿಸಿದ 4.21 ಮೀಟರ್ ರಾಷ್ಟ್ರೀಯ ದಾಖಲೆಗಿಂತ ಕಡಿಮೆಯಾಗಿದೆ.

ತಮಿಳುನಾಡಿನ ಬರಾನಿಕಾ ಇಳಂಗೋವನ್ 4 ಮೀಟರ್ ಜಿಗಿದು ಬೆಳ್ಳಿ ಗೆದ್ದರೆ, ಕೇರಳದ ಮರಿಯಾ ಜೈಸನ್ (3.90 ಮೀಟರ್)  ಮೂರನೇ ಸ್ಥಾನ ಪಡೆದರು.

ADVERTISEMENT

ಏಷ್ಯನ್ ಗೇಮ್ಸ್ ಕಂಚಿನ ಪದಕ ವಿಜೇತೆ ನಂದಿನಿ ಅಗಸರ ಏಳು ಸ್ಪರ್ಧೆಗಳ ಹೆಪ್ಟಾಥ್ಲಾನ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.