ADVERTISEMENT

ಹಾಕಿ: ಭಾರತ ತಂಡದಲ್ಲಿ ಸುನಿಲ್‌ಗೆ ಅವಕಾಶ

ಏಷ್ಯಾಕಪ್ ಟೂರ್ನಿ: ರೂಪಿಂದರ್ ಪಾಲ್ ಸಾರಥ್ಯ; 10 ಹೊಸಮುಖ

ಪಿಟಿಐ
Published 9 ಮೇ 2022, 12:55 IST
Last Updated 9 ಮೇ 2022, 12:55 IST
ಎಸ್‌.ವಿ.ಸುನಿಲ್‌
ಎಸ್‌.ವಿ.ಸುನಿಲ್‌   

ನವದೆಹಲಿ: ಕನ್ನಡಿಗ, ಫಾರ್ವರ್ಡ್‌ ಆಟಗಾರ ಎಸ್‌.ವಿ. ಸುನಿಲ್‌ ಅವರು ಏಷ್ಯಾಕಪ್ ಟೂರ್ನಿಗೆ ಭಾರತ ಹಾಕಿ ತಂಡದಲ್ಲಿ ಸ್ಥಾನ ಗಿಟ್ಟಿಸಿದ್ದಾರೆ. ಜಕಾರ್ತದಲ್ಲಿ ಇದೇ 23ರಿಂದ ನಿಗದಿಯಾಗಿರುವ ಟೂರ್ನಿಗೆ 20 ಆಟಗಾರರ ತಂಡವನ್ನು ಸೋಮವಾರ ಪ್ರಕಟಿಸಲಾಗಿದ್ದು, ರೂಪಿಂದರ್ ಪಾಲ್‌ ಅವರಿಗೆ ನಾಯಕತ್ವ ವಹಿಸಲಾಗಿದೆ.

ಜೂನ್‌ 1ರವರೆಗೆ ನಡೆಯುವ ಟೂರ್ನಿಯು ವಿಶ್ವಕಪ್‌ಗೆ ಅರ್ಹತಾ ಸ್ಪರ್ಧೆಯಾಗಿದೆ. ಅನುಭವಿ ಆಟಗಾರರಾದ ಮನ್‌ಪ್ರೀತ್ ಸಿಂಗ್‌, ಪಿ.ಆರ್.ಶ್ರೀಜೇಶ್‌ ಮತ್ತು ಹರ್ಮನ್‌ಪ್ರೀತ್ ಸಿಂಗ್ ಅವರಿಗೆ ವಿಶ್ರಾಂತಿ ನೀಡಲಾಗಿದ್ದು, ಬೀರೇಂದ್ರ ಲಾಕ್ರಾ ಉಪನಾಯಕನ ಜವಾಬ್ದಾರಿ ನಿಭಾಯಿಸಲಿದ್ದಾರೆ.

ರೂಪಿಂದರ್ ಮತ್ತು ಲಾಕ್ರಾ ಟೋಕಿಯೊ ಒಲಿಂಪಿಕ್ಸ್ ಬಳಿಕ ನಿವೃತ್ತಿ ಘೋಷಿಸಿದ್ದರು. ಬಳಿಕ ತಾವು ಆಯ್ಕೆಗೆ ಲಭ್ಯವಿರುವುದಾಗಿ ತಿಳಿಸಿದ್ದರು. ತಂಡದ ಮಾಜಿ ನಾಯಕ, ಎರಡು ಬಾರಿಯ ಒಲಿಂಪಿಯನ್‌ ಸರ್ದಾರ್ ಸಿಂಗ್ ಅವರಿಗೆ ಮುಖ್ಯ ಕೋಚ್ ಆಗಿ ಇದು ಮೊದಲ ಟೂರ್ನಿಯಾಗಿದೆ.

ADVERTISEMENT

ಏಷ್ಯಾಕಪ್ ಟೂರ್ನಿಗೆ ಭಾರತ ತಂಡವು ಎ ಗುಂಪಿನಲ್ಲಿ ಸ್ಥಾನ ಪಡೆದಿದೆ. ಜಪಾನ್, ಪಾಕಿಸ್ತಾನ ಮತ್ತು ಆತಿಥೇಯ ಇಂಡೊನೇಷ್ಯಾ ಇದೇ ಗುಂಪಿನಲ್ಲಿವೆ.

ಕರ್ನಾಟಕದ ಶೇಷೇಗೌಡ ಬಿ.ಎಂ, ಯಶದೀಪ್ ಸಿವಾಚ್‌, ಅಭಿಷೇಕ್ ಲಾಕ್ರಾ, ಮಂಜೀತ್‌, ವಿಷ್ಣುಕಾಂತ್ ಸಿಂಗ್‌, ಉತ್ತಮ್ ಸಿಂಗ್‌, ಮರೀಶ್ವರನ್ ಶಕ್ತಿವೇಲ್‌, ಪವನ್ ರಾಜಭರ್‌, ಆಭರನ್ ಸುದೇವ್ ಮತ್ತು ಎಸ್‌.ಕಾರ್ತಿ ತಂಡದಲ್ಲಿರುವ ಹೊಸಮುಖಗಳಾಗಿವೆ.

ತಂಡ ಇಂತಿದೆ:ಗೋಲ್‌ಕೀಪರ್‌ಗಳು:ಪಂಕಜ್ ಕುಮಾರ್ ರಾಜಕ್‌,ಸೂರಜ್ ಕರ್ಕೇರ
ಡಿಫೆಂಡರ್ಸ್:ರೂಪಿಂದರ್ ಪಾಲ್ ಸಿಂಗ್ (ನಾಯಕ),ಯಶದೀಪ್ ಸಿವಾಚ್,ಅಭಿಷೇಕ್ ಲಾಕ್ರಾ, ಬೀರೇಂದ್ರ ಲಾಕ್ರಾ (ಉಪ ನಾಯಕ),ಮಂಜೀತ್,ದೀಪ್‌ಸನ್‌ ಟಿರ್ಕಿ.
ಮಿಡ್‌ಫೀಲ್ಡರ್ಸ್:ವಿಷ್ಣುಕಾಂತ್ ಸಿಂಗ್,ರಾಜ್ ಕುಮಾರ್ ಪಾಲ್,ಮರೀಶ್ವರನ್ ಶಕ್ತಿವೇಲ್,ಶೇಷೇಗೌಡ ಬಿ.ಎಂ,ಸಿಮ್ರನ್‌ಜೀತ್‌ ಸಿಂಗ್.
ಫಾರ್ವರ್ಡ್ಸ್: ಪವನ್ ರಾಜಭರ್,ಅಭರಣ್‌ ಸುದೇವ್,ಎಸ್. ವಿ. ಸುನೀಲ್,ಉತ್ತಮ್ ಸಿಂಗ್,ಎಸ್.ಕಾರ್ತಿ

ಬದಲಿ ಆಟಗಾರರು:ಮಣಿಂದರ್ ಸಿಂಗ್,ನೀಲಮ್ ಸಂಜೀಪ್ ಕ್ಸೆಸ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.