ADVERTISEMENT

ಮ್ಯಾಡ್ರಿಡ್ ಓಪನ್ ಪ್ರಶಸ್ತಿ ಗೆದ್ದ ಸಬಲೆಂಕಾ

ಏಜೆನ್ಸೀಸ್
Published 9 ಮೇ 2021, 15:49 IST
Last Updated 9 ಮೇ 2021, 15:49 IST
ಪ್ರಶಸ್ತಿಯೊಂದಿಗೆ ಅಯಾನ ಸಬಲೆಂಕಾ –ಎಎಫ್‌ಪಿ ಚಿತ್ರ
ಪ್ರಶಸ್ತಿಯೊಂದಿಗೆ ಅಯಾನ ಸಬಲೆಂಕಾ –ಎಎಫ್‌ಪಿ ಚಿತ್ರ   

ಮ್ಯಾಡ್ರಿಡ್: ಬೆಲಾರಸ್‌ನ ಅಯಾನ ಸಬಲೆಂಕಾ ಅವರು ಮ್ಯಾಡ್ರಿಡ್ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ವಿಭಾಗದ ಪ್ರಶಸ್ತಿ ಗೆದ್ದುಕೊಂಡರು. ಭಾನುವಾರ ನಡೆದ ಫೈನಲ್‌ನಲ್ಲಿ ಅವರು ಅಗ್ರ ಕ್ರಮಾಂಕದ ಆಟಗಾರ್ತಿ, ಆಸ್ಟ್ರೇಲಿಯಾದ ಆ್ಯಶ್ಲಿ ಬಾರ್ಟಿ ಅವರನ್ನು6-0, 3-6, 6-4ರಲ್ಲಿ ಮಣಿಸಿದರು. ಈ ಮೂಲಕ 10ನೇ ಡಬ್ಲ್ಯುಟಿಎ ಪ್ರಶಸ್ತಿ ಗೆದ್ದುಕೊಂಡರು. ಆವೆಮಣ್ಣಿನ ಅಂಗಣದಲ್ಲಿ ಇದು ಅವರು ಗೆದ್ದ ಮೊದಲ ಪ್ರಶಸ್ತಿಯಾಗಿದೆ.

ಪುರುಷರ ವಿಭಾಗದ ಫೈನಲ್‌ನಲ್ಲಿ ಅಲೆಕ್ಸಾಂಡರ್ ಜ್ವೆರೆವ್ ಮತ್ತು ಮಟಿಯೊ ಬರೆಟಿನಿ ಸೆಣಸುವರು. ಸೆಮಿಫೈನಲ್‌ನಲ್ಲಿ ಜ್ವೆರೆವ್ 6-3, 6-4ರಲ್ಲಿ ಡಾಮಿನಿಕ್ ಥೀಮ್ ಎದುರು ಗೆದ್ದರು. ಬರೆಟಿನಿ 6-4, 6-4ರಲ್ಲಿ ಕಾಸ್ಪರ್ ರೂಡ್‌ ಅವರನ್ನು ಮಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT