ADVERTISEMENT

ಈಜು: ಸಾಜನ್ ಪ್ರಕಾಶ್‌ ಐತಿಹಾಸಿಕ ಸಾಧನೆ

ಪಿಟಿಐ
Published 26 ಜೂನ್ 2021, 17:18 IST
Last Updated 26 ಜೂನ್ 2021, 17:18 IST
ಸಾಜನ್ ಪ್ರಕಾಶ್ –ಎಎಫ್‌ಪಿ ಚಿತ್ರ
ಸಾಜನ್ ಪ್ರಕಾಶ್ –ಎಎಫ್‌ಪಿ ಚಿತ್ರ   

ನವದೆಹಲಿ: ಕೇರಳದ ಸಾಜನ್ ಪ್ರಕಾಶ್ ಒಲಿಂಪಿಕ್ಸ್‌ಗೆ ‘ಎ’ ದರ್ಜೆಯ ಅರ್ಹತೆ ಗಳಿಸಿದ ಭಾರತದ ಮೊದಲ ಈಜುಪಟು ಎನಿಸಿಕೊಂಡರು. ಇಟಲಿಯ ರೋಮ್‌ನಲ್ಲಿ ನಡೆಯುತ್ತಿರುವ ಸೆಟೆ ಕೊಲ್ಲಿ ಟ್ರೋಫಿ ಸ್ಪರ್ಧೆಯ 200 ಮೀಟರ್ಸ್ ಬಟರ್‌ಫ್ಲೈ ವಿಭಾಗದಲ್ಲಿ1 ನಿಮಿಷ, 56:38 ಸೆಕೆಂಡುಗಳ ಸಾಧನೆಯೊಂದಿಗೆ ಅವರು ಟೋಕಿಯೊ ಟಿಕೆಟ್ ಗಿಟ್ಟಿಸಿಕೊಂಡರು.

27 ವರ್ಷದ ಸಾಜನ್ 2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದರು. ಶನಿವಾರ ನಡೆದ ಸ್ಪರ್ಧೆಯಲ್ಲಿ ‘ಎ’ ದರ್ಜೆಗೆ 1 ನಿಮಿಷ, 56.48 ಸೆಕೆಂಡುಗಳ ಗುರಿ ನಿಗದಿ ಮಾಡಲಾಗಿತ್ತು. ಸಾಜನ್ 0.1 ಸೆಕೆಂಡು ಅಂತರದಲ್ಲಿ ಗುರಿ ಮುಟ್ಟಿದರು.

ಕಳೆದ ವಾರ ನಡೆದಿದ್ದ ಬಿಲ್‌ಗ್ರೇಡ್ ಟ್ರೋಫಿ ಸ್ಪರ್ಧೆಯಲ್ಲಿ1 ನಿಮಿಷ, 56.96 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ್ದರು. ಹೀಗಾಗಿ ಅಲ್ಲಿ ಅವರಿಗೆ ‘ಎ’ ದರ್ಜೆಯ ಅರ್ಹತೆ ಕೈತಪ್ಪಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.