ಬೆಂಗಳೂರು: ಕರ್ನಾಟಕದ ಕ್ಯಾಂಡಿಡೇಟ್ ಮಾಸ್ಟರ್ ಸಮರ್ಥ್ ಜಗದೀಶ್ ರಾವ್ ಅವರು ಆಂಧ್ರಪ್ರದೇಶದ ವಿಝಿಯನಗರಂನಲ್ಲಿ ಶನಿವಾರ ಮುಕ್ತಾಯಗೊಂಡ 5ನೇ ರಾಷ್ಟ್ರೀಯ ವಿಶೇಷಚೇತನರ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ.
ಹೊನ್ನಾವರ ಅಂಚೆ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಮರ್ಥ್, ಜೂನ್ 25 ರಿಂದ 28ರವರೆಗೆ ನಡೆದ ಈ ಚಾಂಪಿಯನ್‌ಷಿಪ್‌ನಲ್ಲಿ 9 ಸುತ್ತುಗಳಿಂದ 7 ಅಂಕ (5 ಗೆಲುವು, 4 ಡ್ರಾ) ಗಳಿಸಿ ಅಜೇಯರಾಗುಳಿದರು. 13 ರಾಜ್ಯಗಳ 101 ವಿಶೇಷಚೇತನ ಆಟಗಾರರು ಟೂರ್ನಿಯಲ್ಲಿ ಭಾಗವಹಿಸಿದ್ದರು.
ಈ ಹಿಂದೆ 2022 ಹಾಗೂ 2024 ರಲ್ಲಿ ಅವರು ಇದೇ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದರು.
ಸಮರ್ಥ ಅವರು ಗೋವಾದಲ್ಲಿ ಜುಲೈ 21 ರಿಂದ ನಡೆಯಲಿರುವ 24ನೇ IPCA ವಿಶ್ವಮಟ್ಟದ ವಿಶೇಷ ಚೇತನರ ಸ್ಪರ್ಧೆಯಲ್ಲಿ ಭಾಗವಹಿಸಲು ಆಯ್ಕೆಯಾದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.