ADVERTISEMENT

ಸಂಗ್ವಾನ್‌ ಮೇಲೆ ನಿಷೇಧ

ಪಿಟಿಐ
Published 26 ಡಿಸೆಂಬರ್ 2019, 21:22 IST
Last Updated 26 ಡಿಸೆಂಬರ್ 2019, 21:22 IST

ನವದೆಹಲಿ: ನಿಷೇಧಿತ ಉದ್ದೀಪನಾ ಮದ್ದು ಸೇವಿಸಿದ್ದು ಸಾಬೀತಾಗಿರುವ ಕಾರಣ ಭಾರತದ ಬಾಕ್ಸರ್‌ ಸುಮಿತ್‌ ಸಂಗ್ವಾನ್‌ ಮೇಲೆ ರಾಷ್ಟ್ರೀಯ ಉದ್ದೀಪನಾ ಮದ್ದು ತಡೆ ಘಟಕ (ನಾಡಾ) ಗುರುವಾರ ಒಂದು ವರ್ಷ ನಿಷೇಧ ಹೇರಿದೆ.

2012ರ ಲಂಡನ್‌ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದ ಸುಮಿತ್‌, ಏಷ್ಯನ್‌ ಕ್ರೀಡಾಕೂಟದಲ್ಲಿ ಬೆಳ್ಳಿಯ ಪದಕ ಜಯಿಸಿದ್ದರು. ತಕ್ಷಣದಿಂದಲೇ ನಿಷೇಧ ಜಾರಿಯಾಗಿರುವ ಕಾರಣ ಅವರು ಒಲಿಂಪಿಕ್‌ ಅರ್ಹತಾ ಟ್ರಯಲ್ಸ್‌ನಲ್ಲಿ ಭಾಗವಹಿಸುವ ಅವಕಾಶ ಕಳೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT