ಜಕಾರ್ತಾ: ವಿಶ್ವದ ಮಾಜಿ ಅಗ್ರಮಾನ್ಯ ಡಬಲ್ಸ್ ಜೋಡಿಯಾದ ಸಾತ್ವಿಕ್‌ಸಾಯಿರಾಜ್ ರಣಕಿರೆಡ್ಡಿ– ಚಿರಾಗ್ ಶೆಟ್ಟಿ, ಇಂಡೊನೇಷ್ಯಾ ಓಪನ್ ಸೂಪರ್ 1000 ಟೂರ್ನಿಯ ಸೆಮಿಫೈನಲ್‌ನಲ್ಲಿ ಸೋಲನುಭವಿಸಿದರು. ಇದರೊಡನೆ ಟೂರ್ನಿಯಲ್ಲಿ ಭಾರತದ ಸವಾಲು ಅಂತ್ಯಗೊಂಡಿತು.
ಮಲೇಷ್ಯಾದ ಮಾನ್ ವೀ ಚೊಂಗ್– ಟೀ ಕೈ ವುನ್ ಜೋಡಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ 21–19, 21–16 ರಿಂದ ಮಾಜಿ ಚಾಂಪಿಯನ್ ಆದ ಸಾತ್ವಿಕ್– ಚಿರಾಗ್ ಜೋಡಿಯನ್ನು ಕೇವಲ 43 ನಿಮಿಷಗಳಲ್ಲಿ ಸೋಲಿಸಿತು. ಇವರೆಗಿನ ಐದು ಮುಖಾಮುಖಿಯಲ್ಲಿ ಇದು ಮಲೇಷ್ಯಾದ ಜೋಡಿಗೆ, ಸಾತ್ವಿಕ್–ಚಿರಾಗ್ ವಿರುದ್ಧ ಮೊದಲ ಜಯ.
ಜನವರಿಯಲ್ಲಿ ಇಂಡೊನೇಷ್ಯಾ ಮಾಸ್ಟರ್ಸ್ ಮತ್ತು ಹೋದ ತಿಂಗಳು ಮಲೇಷ್ಯಾ ಮಾಸ್ಟರ್ಸ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದ ಮಾನ್– ವುನ್ ಜೋಡಿ ಎದುರಾಳಿಗೆ ಚೇತರಿಸಿಕೊಳ್ಳಲು ಅವಕಾಶ ನೀಡಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.