
ಹೈದರಾಬಾದ್: ಅನುಭವಿ ಗೋಲ್‌ಕೀಪರ್ ಸವಿತಾ ಪೂನಿಯಾ ಅವರು ಎಫ್‌ಐಎಚ್ ಹಾಕಿ ವಿಶ್ವಕಪ್ ಕ್ವಾಲಿಫೈಯರ್ಸ್ ಪಂದ್ಯಗಳಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. 20 ಆಟಗಾರರ ತಂಡವನ್ನು ‘ಹಾಕಿ ಇಂಡಿಯಾ’ ಭಾನುವಾರ ಪ್ರಕಟಿಸಿದ್ದು, ಮಿಡ್‌ಫೀಲ್ಡರ್ ಸಲೀಮಾ ಟೇಟೆ ಅವರು ತಂಡವನ್ನು ಮುನ್ನಡೆಸಲಿದ್ದಾರೆ.
‘ಕೌಟುಂಬಿಕ ಕಾರಣಗಳಿಂದಾಗಿ ಸವಿತಾ ಅವರು ರಾಷ್ಟ್ರೀಯ ತರಬೇತಿ ಶಿಬಿರಕ್ಕೂ ಹಾಜರಾಗಿಲ್ಲ. ಹೀಗಾಗಿ, ಅವರನ್ನು ತಂಡದ ಆಯ್ಕೆ ವೇಳೆ ಪರಿಗಣಿಸಲಾಗಿಲ್ಲ’ ಎಂದು ಮೂಲಗಳು ತಿಳಿಸಿವೆ.
ಕ್ವಾಲಿಫೈಯರ್ಸ್ ಪಂದ್ಯಗಳು ಇದೇ 8ರಿಂದ 14ರವರೆಗೆ ಇಲ್ಲಿ ನಡೆಯಲಿವೆ. ಆತಿಥೇಯ ಭಾರತ, ಇಂಗ್ಲೆಂಡ್, ಸ್ಕಾಟ್ಲೆಂಡ್, ಕೊರಿಯಾ, ಇಟಲಿ, ಉರುಗ್ವೆ, ವೇಲ್ಸ್ ಹಾಗೂ ಆಸ್ಟ್ರಿಯಾ ತಂಡಗಳು ಕಣಕ್ಕಿಳಿಯಲಿವೆ. ಈ ಪೈಕಿ, ಮೂರು ತಂಡಗಳು ಆಗಸ್ಟ್‌ನಲ್ಲಿ ನಡೆಯಲಿರುವ ಟೂರ್ನಿಗೆ ಅರ್ಹತೆ ಪಡೆಯಲಿವೆ.
ತಂಡ ಹೀಗಿದೆ
ಗೋಲ್‌ಕೀಪರ್ಸ್: ಬನ್ಸಾರಿ ಸೋಳಂಕಿ, ಬಿಚೂ ದೇವಿ ಖಾರೀಬಾಮ್.
ಡಿಫೆಂಡರ್ಸ್: ಸುಶೀಲಾ ಚಾನು ಪುಖರಂಬಮ್, ನಿಕ್ಕಿ ಪ್ರಧಾನ್, ಮನಿಶಾ ಚೌಹಾನ್, ಉದಿತಾ, ಇಶಿಕಾ ಚೌಧರಿ.
ಮಿಡ್‌ಫೀಲ್ಡರ್ಸ್: ನೇಹಾ, ಸಲೀಮಾ ಟೇಟೆ (ನಾಯಕಿ), ಸುನೆಲಿತಾ ಟೊಪ್ಪೊ, ಸಾಕ್ಷಿ ರಾಣಾ, ವೈಷ್ಣವಿ ವಿತ್ತಲ್ ಫಾಲ್ಕೆ, ರುತುಜಾ ದಾದಾಸೊ ಪಿಸಾಳ್, ದೀಪಿಕಾ ಸೊರೆಂಗ್.
ಫಾರ್ವರ್ಡ್: ನವನೀತ್ ಕೌರ್, ಇಶಿಕಾ, ಲಾಲರೆಮ್‌ಸಿಯಾಮಿ, ಬ್ಯೂಟಿ ಡುಂಗ್‌ಡುಂಗ್, ಬಲಜೀತ್ ಕೌರ್ ಹಾಗೂ ಅನು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.