
ಬ್ಯಾಸ್ಕೆಟ್‌ಬಾಲ್
ಬೆಂಗಳೂರು: ಅರವಿಂದ್.ಎ ಹಾಗೂ ಸಂಜನಾ ರಮೇಶ್ ಅವರು ಭಾನುವಾರ ಆರಂಭವಾಗಲಿರುವ 75ನೇ ಸೀನಿಯರ್ ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ರಾಜ್ಯ ಪುರುಷರ ಮತ್ತು ಮಹಿಳೆಯರ ತಂಡವನ್ನು ಮುನ್ನಡೆಸಲಿದ್ದಾರೆ.
ಕರ್ನಾಟಕ ರಾಜ್ಯ ಬ್ಯಾಸ್ಕೆಟ್‌ಬಾಲ್ ಸಂಸ್ಥೆಯು ಶುಕ್ರವಾರ ತಂಡಗಳನ್ನು ಪ್ರಕಟಿಸಿದೆ. ಪುರುಷರ ತಂಡದ ಉಪನಾಯಕನಾಗಿ ಪ್ರತ್ಯಾಂಶು ತೋಮರ್ ಹಾಗೂ ಮಹಿಳೆಯರ ತಂಡದ ಉಪನಾಯಕಿಯಾಗಿ ಬಾಂಧವ್ಯ ಎಚ್.ಎಂ. ಆಯ್ಕೆಯಾಗಿದ್ದಾರೆ.
ಈ ಟೂರ್ನಿಯು ಚೆನ್ನೈನಲ್ಲಿ ಜನವರಿ 11ರ ವರೆಗೆ ನಡೆಯಲಿದೆ.
ತಂಡಗಳು ಇಂತಿವೆ: ಪುರುಷರು: ಅರವಿಂದ್ ಎ. (ನಾಯಕ), ಪ್ರತ್ಯಾಂಶು ತೋಮರ್ (ಉಪನಾಯಕ), ಅನಿಲ್‌ಕುಮಾರ್ ಬಿ.ಕೆ., ಆ್ಯರನ್ ಎಂ., ಶಶಾಂಕ್ ಜೆ. ರೈ, ಅಭಿಷೇಕ್ ಗೌಡ, ಸುಮಂತ್ ಎಸ್., ಧೀರಜ್ ರೆಡ್ಡಿ ವೈ.ಎ., ಮನೋಜ್ ಬಿ.ಎಂ., ಬತೇಶ್ ಎಸ್., ಲಿಖಿತ್ ಬೋಪಣ್ಣ ಹಾಗೂ ಪಿ.ಕೆ. ಗೌತಮ್. ಮುಖ್ಯಕೋಚ್: ತಂಗಚನ್ ಎಂ.ಸಿ., ಸಹಾಯಕ ಕೋಚ್: ಬಿ.ಸಿ.ಉಮಾಶಂಕರ್.
ಮಹಿಳೆಯರು: ಸಂಜನಾ ರಮೇಶ್ (ನಾಯಕ), ಬಾಂಧವ್ಯ ಎಚ್.ಎಂ. (ಉಪನಾಯಕಿ), ಶ್ರುತಿ ಅರವಿಂದ್, ಶೋಭನಾ ಎಸ್., ರುತ್ ಆ್ಯನ್ನಾ ಬಿ., ಆಧ್ಯಾ ಗೌಡ, ಮಹೆಕ್ ಶರ್ಮಾ, ಬಿಂದುಶ್ರೀ ಗೌಡ, ನಿಧಿ ಉಮೇಶ್, ಸಾನಿಕಾ ವೆಂಕಟೇಶ್, ಶ್ರಾವಣಿ ಶಿವಣ್ಣ ಹಾಗೂ ಟಿ.ಎ.ಮಾನಸ. ಕೋಚ್: ಜಯವಂತಿ ಎಸ್., ಸಹಾಯಕ ಕೋಚ್: ಜೆ.ಇ.ಮೋಹನ್ ಕುಮಾರ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.