ಬೆಳಗಾವಿ: ಶಾರ್ವಿಲ್ ಕರಂಬೆಳಕರ್ ಮತ್ತು ಸಾಕ್ಷ್ಯಾ ಸಂತೋಷ್ ಅವರು ವಿನಯಾ ಕೋಟ್ಯಾನ್ ಸ್ಮರಣಾರ್ಥ ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಹೋಪ್ಸ್ ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡರು.
ಬೆಳಗಾವಿ ಜಿಲ್ಲಾ ಟೇಬಲ್ ಟೆನಿಸ್ ಸಂಸ್ಥೆ ಆಶ್ರಯದಲ್ಲಿ ತಿಳಕವಾಡಿ ಕ್ಲಬ್‌ನಲ್ಲಿ ಶನಿವಾರ ಆರಂಭವಾದ ನಾಲ್ಕು ದಿನಗಳ ಈ ಟೂರ್ನಿಯ ಹೋಪ್ಸ್ ಬಾಲಕರ ಫೈನಲ್‌ನಲ್ಲಿ ಶಾರ್ವಿಲ್ 9–11, 11–3, 12–10, 9–11, 11–4 ರಿಂದ ಆರ್ಯನ್ ಮೆನನ್ ಅವರನ್ನು ಸೋಲಿಸಿದನು.
ಸೆಮಿಫೈನಲ್‌ನಲ್ಲಿ ಆರ್ಯನ್ 12–10, 11–7, 11–4 ರಿಂದ ಅಥರ್ವ ಚೇತನ್ ಮೂರ್ತಿ ವಿರುದ್ಧ, ಶಾರ್ವಿಲ್ 11–4, 11–3, 11–5 ರಿಂದ ಧ್ರುವ್ ಮುಂಜಿ ವಿರುದ್ಧ ಜಯಗಳಿಸಿದ್ದರು.
ಬಾಲಕಿಯರ ಫೈನಲ್‌ನಲ್ಲಿ ಸಾಕ್ಷ್ಯಾ 11–9, 11–9, 11–8ರಲ್ಲಿ ನೇರ ಸೆಟ್‌ಗಳಿಂದ ನಂದನಾ ಬಂಡಿ ವಿರುದ್ಧ ಜಯಗಳಿಸಿದಳು.
ಸೆಮಿಫೈನಲ್‌ನಲ್ಲಿ ಸಾಕ್ಷ್ಯಾ 11–9, 12–10, 11–3 ರಿಂದ ಸಾನ್ವಿ ಹರಿಪ್ರಸಾದ ರಾವ್ ವಿರುದ್ಧ, ನಂದನಾ 11–9, 5–11, 11–6, 11–8 ರಿಂದ ಸಮನ್ವಿ ಸಂದೀಪ್ ವಿರುದ್ಧ ಜಯಗಳಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.