ADVERTISEMENT

ಅಖಿಲ ಭಾರತ ಕೇರಂ ಪಂದ್ಯಾವಳಿಗೆ ಆಯ್ಕೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2026, 6:07 IST
Last Updated 16 ಫೆಬ್ರುವರಿ 2026, 6:07 IST
ಶಿಡ್ಲಘಟ್ಟದ ಟಿ.ಟಿ.ನರಸಿಂಹಪ್ಪ ಮತ್ತು ಸುಂದರಾಚಾರಿ ಅಖಿಲ ಭಾರತ ಕೇರಂ ಪಂದ್ಯಾವಳಿಗೆ ಆಯ್ಕೆಯಾದರು
ಶಿಡ್ಲಘಟ್ಟದ ಟಿ.ಟಿ.ನರಸಿಂಹಪ್ಪ ಮತ್ತು ಸುಂದರಾಚಾರಿ ಅಖಿಲ ಭಾರತ ಕೇರಂ ಪಂದ್ಯಾವಳಿಗೆ ಆಯ್ಕೆಯಾದರು   

ಶಿಡ್ಲಘಟ್ಟ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯೋಜಿಸಿರುವ ಅಖಿಲ ಭಾರತ ಸೇವಾ ಕೇರಂ ಪಂದ್ಯಾವಳಿಗೆ ನಗರದ ಸರ್ಕಾರಿ ಆಸ್ಪತ್ರೆ ಪ್ರಯೋಗಾಲಯ ತಂತ್ರಜ್ಞ ಟಿ.ಟಿ.ನರಸಿಂಹಪ್ಪ ತರಬೇತುದಾರರಾಗಿ ಮತ್ತು ತಾಲ್ಲೂಕಿನ ಕಂಬದಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಸುಂದರಾಚಾರಿ ಆಟಗಾರರಾಗಿ ಆಯ್ಕೆಯಾದರು.

ನವದೆಹಲಿ ತ್ಯಾಗರಾಜ ಕ್ರೀಡಾಂಗಣದಲ್ಲಿ ಫೆ.17ರಿಂದ 24ರವರೆಗೆ ನಡೆಯಲಿರುವ ಕೇರಂ ಪಂದ್ಯಾವಳಿಯಲ್ಲಿ 6 ಮಂದಿ ಪುರುಷರ ತಂಡ ಮತ್ತು 6 ಮಂದಿ ಮಹಿಳೆಯರ ತಂಡ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ. ಒಟ್ಟು 12 ಮಂದಿ ತಂಡಕ್ಕೆ ಶಿಡ್ಲಘಟ್ಟದ ಟಿ.ಟಿ.ನರಸಿಂಹಪ್ಪ ತರಬೇತುದಾರರಾಗಿ ಆಯ್ಕೆಯಾಗಿದ್ದು, ಅವರೊಂದಿಗೆ ಒಬ್ಬರು ವ್ಯವಸ್ಥಾಪಕ ಜೊತೆಗಿರುವರು.

ರಾಷ್ಟ್ರಮಟ್ಟದಲ್ಲಿ ಗೆಲುವು ಸಾಧಿಸುವ ಮೂಲಕ ಶಿಡ್ಲಘಟ್ಟ ತಾಲ್ಲೂಕಿಗೆ ಇವರು ಕೀರ್ತಿ ತಂದಿದ್ದಾರೆ. ಇತರರಿಗೆ ತರಬೇತಿ ನೀಡುವ ಮೂಲಕ ತಾಲ್ಲೂಕಿನಲ್ಲಿ ಕೇರಂ ಆಟದ ಪ್ರತಿಭೆ ಹುಟ್ಟಿಗೆ ಕಾರಣರಾಗಬೇಕು ಎಂದು ಸರ್ಕಾರಿ ನೌಕರರ ಸಂಘದ ರಾಜ್ಯ ಕಾರ್ಯದರ್ಶಿ ಕೆ.ಎನ್.ಸುಬ್ಬಾರೆಡ್ಡಿ ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.