ADVERTISEMENT

ಸಾನಿಯಾ ಜತೆ ವಿಚ್ಛೇದನ ವದಂತಿ: ಶೋಯಬ್‌ ಮಲಿಕ್‌ ಹೇಳಿದ್ದೇನು?

ಈದ್‌ನ ದಿನದಂದು ಪತ್ನಿ ಹಾಗೂ ನನ್ನ ಮಗ ನನ್ನ ಜತೆ ಇಲ್ಲ. ಅವರ ಜತೆ ಈದ್‌ ಆಚರಿಸಲು ಬಯಸಿದ್ದೆ: ಮಲಿಕ್

ಪಿಟಿಐ
Published 25 ಏಪ್ರಿಲ್ 2023, 3:04 IST
Last Updated 25 ಏಪ್ರಿಲ್ 2023, 3:04 IST
ಸಾನಿಯಾ ಮಿರ್ಜಾ ಹಾಗೂ ಶೋಯಬ್ ಮಲಿಕ್‌
ಸಾನಿಯಾ ಮಿರ್ಜಾ ಹಾಗೂ ಶೋಯಬ್ ಮಲಿಕ್‌   

ಕರಾಚಿ: ಭಾರತದ ಮಾಜಿ ಟೆನ್ನಿಸ್‌ ತಾರೆ ಸಾನಿಯಾ ಮಿರ್ಜಾ ಅವರಿಗೆ ವಿಚ್ಛೇದನ ನೀಡಲಿದ್ದಾರೆ ಎನ್ನುವ ವದಂತಿಯನ್ನು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯಬ್ ಮಲಿಕ್ ತಳ್ಳಿ ಹಾಕಿದ್ದಾರೆ. ಒತ್ತಡದ ವೇಳಾಪಟ್ಟಿಯಿಂದಾಗಿ ಇಬ್ಬರು ಸುಮಾರು ದಿನಗಳಿಂದ ಒಟ್ಟಿಗೆ ಕಾಣಿಸಿಕೊಳ್ಳುತ್ತಿಲ್ಲ ಎಂದು ಅವರು ಹೇಳಿದ್ದಾರೆ.

2010ರಲ್ಲಿ ವಿವಾಹವಾಗಿದ್ದ ಈ ಜೋಡಿ, ಕಳೆದ ಆರು ತಿಂಗಳಿನಿಂದ ಜತೆಯಾಗಿ ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ಇವರಿಬ್ಬರು ಬೇರೆ ಬೇರೆಯಾಗಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದವು.

ಇಬ್ಬರೂ ಅಂತರರಾಷ್ಟ್ರೀಯ ಕ್ರೀಡಾಪಟುಗಳಾಗಿದ್ದು, ಇಬ್ಬರ ಒತ್ತಡ ವೇಳಾಪಟ್ಟಿಯಿಂದಾಗಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿಲ್ಲವಷ್ಟೇ. ನಮ್ಮಿಬ್ಬರ ನಡುವಿನ ವಿಚ್ಛೇದನ ವದಂತಿ ಆಧಾರರಹಿತವಾಗಿದೆ.
ಶೋಯಬ್ ಮಲಿಕ್

ಸ್ಥಳೀಯ ವಾಹಿನಿಯಲ್ಲಿ ನಡೆದ ಈದ್‌ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಮಾತನಾಡಿದ ಮಲಿಕ್, ತಾವಿಬ್ಬರು ವಿಚ್ಚೇದನ ಪ್ರಕ್ರಿಯೆಯಲ್ಲಿ ಇಲ್ಲವೆಂದೂ, ಇಬ್ಬರು ಬೇರೆ ಬೇರೆಯೂ ಆಗಿಲ್ಲವೆಂದೂ ತಿಳಿಸಿದರು.

ADVERTISEMENT

‘ಈದ್‌ನ ದಿನದಂದು ಪತ್ನಿ ಹಾಗೂ ನನ್ನ ಮಗ ನನ್ನ ಜತೆ ಇಲ್ಲ. ಅವರ ಜತೆ ಈದ್‌ ಆಚರಿಸಲು ಬಯಸಿದ್ದೆ‘ ಎಂದು ಅವರು ಹೇಳಿದರು.

‘ಎಲ್ಲಾ ವೈವಾಹಿಕ ಸಂಬಂಧಗಳಲ್ಲಿ ಏರಿಳಿತ ಇದ್ದೇ ಇರುತ್ತದೆ. ಅಂದಮಾತ್ರಕ್ಕೆ ಸಂಬಂಧಗಳಲ್ಲಿ ಎ‌ಲ್ಲವೂ ಮುಗಿದಿದೆ ಎಂದರ್ಥವಲ್ಲ‘ ಎಂದು ಅವರು ಇದೇ ವೇಳೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.