ADVERTISEMENT

ಒಲಿಂಪಿಕ್ ಅರ್ಹತಾ ಚಾಂಪಿಯನ್‌ಷಿಪ್‌: ಮಹೇಶ್ವರಿಗೆ ಪ್ಯಾರಿಸ್‌ ಟಿಕೆಟ್

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2024, 16:13 IST
Last Updated 28 ಏಪ್ರಿಲ್ 2024, 16:13 IST
   

ನವದೆಹಲಿ: ಭಾರತದ ಮಹೇಶ್ವರಿ ಚೌಹಾಣ್ ಅವರು ದೋಹಾದಲ್ಲಿ ನಡೆಯುತ್ತಿರುವ ಐಎಸ್ಎಸ್ಎಫ್ ಶೂಟಿಂಗ್ ಫೈನಲ್ ಒಲಿಂಪಿಕ್ ಅರ್ಹತಾ ಚಾಂಪಿಯನ್‌ಷಿಪ್‌  ಮಹಿಳಾ ಸ್ಕೀಟ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.

ಇದರೊಂದಿಗೆ ಪ್ಯಾರಿಸ್ ಒಲಿಂಪಿಕ್ಸ್‌ಗೆ ಭಾರತದ 21 ನೇ ಕೋಟಾ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ. 

ಚೊಚ್ಚಲ ಐಎಸ್ಎಸ್ಎಫ್ ಫೈನಲ್‌ನಲ್ಲಿ ಸ್ಪರ್ಧಿಸಿದ್ದ ಮಹೇಶ್ವರಿ, ಭಾನುವಾರ ಚಿನ್ನಕ್ಕಾಗಿ ನಡೆದ ಶೂಟ್ ಆಫ್‌ನಲ್ಲಿ ಚಿಲಿಯ ಫ್ರಾನ್ಸಿಸ್ಕಾ ಕ್ರೊವೆಟ್ಟೊ ಚಾಡಿಡ್ ವಿರುದ್ಧ 3-4 ಅಂತರದಲ್ಲಿ ಸೋತರು. 

ADVERTISEMENT

‘ನಾನು ರೋಮಾಂಚನಗೊಂಡಿದ್ದೇನೆ. ಇಲ್ಲಿಗೆ ಬರಲು ಬಹಳಷ್ಟು ಕಠಿಣ ಪರಿಶ್ರಮಪಟ್ಟಿದ್ದೇನೆ.  ಒಟ್ಟಾರೆಯಾಗಿ ತೃಪ್ತಿಕರವಾಗಿದೆ’ ಎಂದು ಮಹೇಶ್ವರಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.