ADVERTISEMENT

ಶೂಟಿಂಗ್‌: ರುಚಿತಾಗೆ ಗೆಲುವು

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2019, 20:36 IST
Last Updated 16 ಸೆಪ್ಟೆಂಬರ್ 2019, 20:36 IST

ನವದೆಹಲಿ (ಪಿಟಿಐ): ಭಾರತೀಯ ರೈಲ್ವೆಯ ರುಚಿತಾ ರಾಜೇಂದ್ರ ಇಲ್ಲಿ ಸೋಮವಾರ ಆರಂಭಗೊಂಡ ರಾಷ್ಟ್ರೀಯ ಶೂಟಿಂಗ್ ಟ್ರಯಲ್ಸ್‌ನಲ್ಲಿ ಮಹಿಳಾ ವಿಭಾಗದ 10 ಮೀಟರ್ಸ್ ಏರ್‌ ಪಿಸ್ತೂಲ್ ‌ವಿಭಾಗದಲ್ಲಿ ಮೊದಲಿಗರಾದರು. 237.6 ಸ್ಕೋರ್‌ ಕಲೆ ಹಾಕಿದ ಅವರು ತಮಿಳುನಾಡಿನ ಶ್ರೀನಿವೇತಾ (236.8 ) ಅವರನ್ನು ಹಿಂದಿಕ್ಕಿದರು. 216.8 ಸ್ಕೋರ್ ಗಳಿಸಿದ ಹರಿಯಾಣದ ಶಿಖಾ ನರ್ವಾಲ್ ಮೂರನೆಯವರಾದರು.

60 ಶಾಟ್‌ಗಳ ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ 582 ಸ್ಕೋರ್ ದಾಖಲಿಸಿದ ಶ್ರೀನಿವೇತಾಗೆ ಅಂತಿಮ ಸುತ್ತಿನಲ್ಲಿ ನಿರೀಕ್ಷಿತ ಸಾಮರ್ಥ್ಯ ತೋರಲು ಆಗಲಿಲ್ಲ. ರುಚಿತಾ ಅರ್ಹತಾ ಸುತ್ತಿನಲ್ಲಿ 570 ಸ್ಕೋರುಗಳೊಂದಿಗೆ ಎಂಟನೇ ಸ್ಥಾನಕ್ಕೆ ಕುಸಿದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT