ADVERTISEMENT

ಆಸ್ಟ್ರೇಲಿಯಾ ಓಪನ್‌ ಬ್ಯಾಡ್ಮಿಂಟನ್ ಟೂರ್ನಿಯಿಂದ ಹೊರಬಿದ್ದ ಪಿ.ವಿ. ಸಿಂಧು

ಪಿಟಿಐ
Published 4 ಆಗಸ್ಟ್ 2023, 8:08 IST
Last Updated 4 ಆಗಸ್ಟ್ 2023, 8:08 IST
   

ಸಿಡ್ನಿ: ಶುಕ್ರವಾರ ಇಲ್ಲಿ ನಡೆದ ಮಹಿಳೆಯರ ಸಿಂಗಲ್ಸ್‌ನ ಕ್ವಾರ್ಟರ್‌ಫೈನಲ್‌ನಲ್ಲಿ ಅಮೆರಿಕದ ವಿಶ್ವದ 12ನೇ ಶ್ರೇಯಾಂಕಿತ ಆಟಗಾರ್ತಿ ಬೀವೆನ್‌ ಜಾಂಗ್‌ ವಿರುದ್ಧ ನೇರ ಸೆಟ್‌ಗಳಿಂದ ಸೋತ ನಂತರ ಎರಡು ಬಾರಿಯ ಒಲಿಂಪಿಕ್‌ ಪದಕ ವಿಜೇತೆ ಪಿವಿ ಸಿಂಧು ಆಸ್ಟ್ರೇಲಿಯಾ ಓಪನ್‌ ಬ್ಯಾಡ್ಮಿಂಟನ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಈ ಮೂಲಕ ಸಿಂಧು ಅವರ ಸೆಮಿಫೈನಲ್ ಆಸೆ ಭಗ್ನಗೊಂಡಿದೆ.

4.2 ಲಕ್ಷ ಡಾಲರ್ ಮೊತ್ತದ ಸೂಪರ್ 500 ಟೂರ್ನಮೆಂಟ್‌ನ 39 ನಿಮಿಷಗಳ ಆಟದಲ್ಲಿ 12-21 17-21 ಸೆಟ್‌ಗಳಿಂದ ಸಿಂಧು ಸೋತರು.

ಬೀವೆನ್‌ ಜಾಂಗ್‌ ವಿರುದ್ಧದ ಕಳೆದ 10 ಬಾರಿಯ ಸೆಣೆಸಾಟದಲ್ಲಿ ಸಿಂಧು ಆರು ಬಾರಿ ಗೆದ್ದಿದ್ದರು.

ADVERTISEMENT

ಪಂದ್ಯಾವಳಿಯ ಮೊದಲ ಎರಡು ಸುತ್ತುಗಳಲ್ಲಿ ಅಶ್ಮಿತಾ ಚಲಿಹಾ ಮತ್ತು ಆಕರ್ಷಿ ಕಶ್ಯಪ್ ಅವರನ್ನು ಸಿಂಧು ಮಣಿಸಿದ್ದರು. ಆದರೆ, ಅಮೆರಿಕದ ಆಟಗಾರ್ತಿ ವಿರುದ್ಧದ ಈ ಸೋಲು ಡೆನ್ಮಾರ್ಕ್‌ನ ಕೋಪನ್‌ಹೇಗನ್‌ನಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್‌ಗೂ ಮುನ್ನ ಸಿಂಧು ಅವರಿಗೆ ದೊಡ್ಡ ನಿರಾಶೆಯನ್ನುಂಟುಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.