ಪಿ.ವಿ. ಸಿಂಧು
(ಪಿಟಿಐ ಚಿತ್ರ)
ಹಾಂಗ್‌ಝೌ: ಏಷ್ಯನ್ ಗೇಮ್ಸ್ 2023 ಕ್ರೀಡಾಕೂಟದಲ್ಲಿ ಬ್ಯಾಡ್ಮಿಂಟನ್ ವಿಭಾಗದಲ್ಲಿ ಭಾರತದ ಪಿ.ವಿ. ಸಿಂಧು, ಎಚ್.ಎಸ್. ಪ್ರಣಯ್ ಮತ್ತು ಕಿದಂಬಿ ಶ್ರೀಕಾಂತ್ ಪ್ರಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ.
ಪುರುಷರ ಸಿಂಗಲ್ಸ್ ವಿಭಾಗದಲ್ಲಿ ವಿಶ್ವ ನಂ.7 ರ‍್ಯಾಂಕ್‌ನ ಪ್ರಣಯ್ ಅವರು ಮಂಗೋಲಿಯಾದ ಬಟ್ಡಾವಾ ಮುಂಖ್ಬತ್ ವಿರುದ್ಧ 21-9 21-12ರ ಅಂತರದಲ್ಲಿ ಗೆಲುವು ಸಾಧಿಸಿದರು.
ಮತ್ತೊಂದೆಡೆ ಶ್ರೀಕಾಂತ್ ಅವರು ಕೊರಿಯಾದ ಲೀ ಯುನ್ ಗ್ಯು ವಿರುದ್ಧ 21-16 21-11ರ ಅಂತರದಲ್ಲಿ ಗೆಲುವು ದಾಖಲಿಸಿದರು.
ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಸಿಂಧು ಅವರು ಚೀನಾ ತೈಪೆಯ ವೀ ಚೀ ಸು ವಿರುದ್ಧ 21-10 21-15ರ ಅಂತರದಲ್ಲಿ ಪಾರಮ್ಯ ಮೆರೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.