ಬೆಂಗಳೂರು: ಖೇಲೊ ಇಂಡಿಯಾ ವಿಶ್ವವಿದ್ಯಾಲಯಗಳ ಕ್ರೀಡಾಕೂಟದ ಚಿನ್ನದ ಮೀನು ಬೆಂಗಳೂರಿನ ಶಿವ ಶ್ರೀಧರ್ ಅಪೂರ್ವ ದಾಖಲೆಗೆ ಒಡೆಯರಾದರು. ಈಜು ಸ್ಪರ್ಧೆಯಲ್ಲಿ 7 ಚಿನ್ನ ಮತ್ತು ಎರಡು ಬೆಳ್ಳಿ ಗೆದ್ದ ಅವರು ಕ್ರೀಡಾಕೂಟದಲ್ಲಿ ವೈಯಕ್ತಿಕವಾಗಿ ಗರಿಷ್ಠ ಚಿನ್ನ ಗೆದ್ದ ಅಥ್ಲೀಟ್ ಎನಿಸಿಕೊಂಡರು.
ಮೊದಲ ದಿನ 200 ಮೀಟರ್ಸ್ ವೈಯಕ್ತಿಕ ಮೆಡ್ಲೆಯಲ್ಲಿ ಕೂಟ ದಾಖಲೆಯೊಂದಿಗೆ ಚಿನ್ನದ ಬೇಟೆ ಆರಂಭಿಸಿದ ಅವರು ಗುರುವಾರ 4x200 ಮೀ ಫ್ರೀಸ್ಟೈಲ್‌ನಲ್ಲಿ ದಾಖಲೆ ಮಾಡಿದರು. ಇದರೊಂದಿಗೆ 2020ರ ಕೂಟದಲ್ಲಿ ಸಿದ್ಧಾಂತ್ ಸೇಜ್ವಾಲ್ ಮತ್ತು ಸಾಧ್ವಿ ದುರಿ ಮಾಡಿದ್ದ ದಾಖಲೆ ಹಿಂದಿಕ್ಕಿದರು. ಅವರಿಬ್ಬರು ತಲಾ 5 ಚಿನ್ನ ಗೆದ್ದಿದ್ದರು. ಈಜುಸ್ಪರ್ಧೆಯ ಕೊನೆಯ ದಿನವಾದ ಗುರುವಾರ ಶ್ರೀಹರಿ ನಟರಾಜ್ ಎರಡು ವೈಯಕ್ತಿಕ ಸೇರಿದಂತೆ ಮೂರು ದಾಖಲೆಗಳನ್ನು ತಮ್ಮ ಹೆಸರಿಗೆ ಸೇರಿಸಿಕೊಂಡರು.
ಐದನೇ ದಿನವೂ ಆತಿಥೇಯ ಜೈನ್ ವಿವಿ ಪದಕ ಗಳಿಕೆಯಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಈಜು ಮತ್ತು ಬಾಕ್ಸಿಂಗ್ ಸೇರಿದಂತೆ ಕೂಟದ ಏಳು ಸ್ಪರ್ಧೆಗಳು ಮುಕ್ತಾಯಗೊಂಡಿದ್ದು ಜೈನ್ ವಿವಿ 16 ಚಿನ್ನದೊಂದಿಗೆ 24 ಪದಕಗಳನ್ನು ತನ್ನದಾಗಿಸಿಕೊಂ
ಡಿದೆ. ಕಳೆದ ಬಾರಿಯ ಚಾಂಪಿಯನ್ ಪಂಜಾಬ್ ವಿವಿ ಚೇತರಿಕೆ ಕಂಡಿದ್ದು 9 ಚಿನ್ನದೊಂದಿಗೆ 27 ಪದಕ ಗಳಿಸಿ ಎರಡನೇ ಸ್ಥಾನದಲ್ಲಿದೆ. ಮುಂಬೈ ಮತ್ತು ಅಣ್ಣಾ ವಿವಿ ತಲಾ 6 ಚಿನ್ನ ಗಳಿಸಿವೆ. ಜೈನ್ ಸೇರಿದಂತೆ ರಾಜ್ಯದ 8 ವಿವಿಗಳು ಪದಕ ಪಟ್ಟಿಯಲ್ಲಿ ಸ್ಥಾನ ಗಳಿಸಿವೆ.
ಫಲಿತಾಂಶಗಳು: ಈಜು: ಪುರುಷರ 100 ಮೀ ಫ್ರೀಸ್ಟೈಲ್: ಶ್ರೀಹರಿ ನಟರಾಜ್ (ಜೈನ್ ವಿವಿ)–1. ಕಾಲ: 50.98 (ಕೂಟ ದಾಖಲೆ. ಹಳೆಯದು: 53.01, ರುದ್ರಾಂಶ್ ಮಿಶ್ರಾ); ಹೀರ್ ಶಾ (ಮುಂಬೈ ವಿವಿ)–2, ಆದಿತ್ಯ ದಿನೇಶ್ (ಅಣ್ಣಾ ವಿವಿ)–3; 50 ಮೀ ಬ್ಯಾಕ್‌ಸ್ಟ್ರೋಕ್: ಶ್ರೀಹರಿ ನಟರಾಜ್ (ಜೈನ್)–1. ಕಾಲ: 26.10 (ಕೂಟ ದಾಖಲೆ. ಹಳೆಯದು: 27.43, ಸಿದ್ಧಾಂತ್ ಸೇಜ್ವಾಲ್); ಶಿವ ಶ್ರೀಧರ್ (ಜೈನ್)–2, ಸಿದ್ಧಾಂತ್ ಸೇಜ್ವಾಲ್ (ಪಂಜಾಬ್ ವಿವಿ)–3; 100 ಮೀ ಬ್ರೆಸ್ಟ್‌ಸ್ಟ್ರೋಕ್: ಧನುಷ್ ಸುರೇಶ್ (ಅಣ್ಣಾ)–1. ಕಾಲ:1:03.36 (ಕೂಟ ದಾಖಲೆ. ಹಳೆಯದು: 1:06.30, ಅಂಶ್ ಅರೋರ); ಜಯ್ ಏಕಬೋಟೆ (ಮುಂಬೈ)–2, ಕೃತಾಯುಷ್ ಸಿಂಗ್ (ಅದಮಾಸ್)–3; 4x200 ಮೀ ಫ್ರೀಸ್ಟೈಲ್: ಜೈನ್ ವಿವಿ (ಶ್ರೀಹರಿ ನಟರಾಜ್, ಸಂಜಯ್, ಶಿವ ಶ್ರೀಧರ್, ರಾಜ್ ರೆಲೇಕರ್)–1. ಕಾಲ: 8:06.87 (ಕೂಟ ದಾಖಲೆ. ಹಳೆಯದು: 8:16.04, ಪಂಜಾಬ್ ವಿವಿ); ಪುಣೆ ವಿವಿ–2, ಮುಂಬೈ ವಿವಿ–3.
ಮಹಿಳೆಯರ 100 ಮೀ ಫ್ರೀಸ್ಟೈಲ್: ಋತುಜಾ ಖಾಡೆ (ಶಿವಾಜಿ)–1, ಕಾಲ: 1:00.81 (ಕೂಟ ದಾಖಲೆ. ಹಳೆಯದು: ಸಾಧ್ವಿ ದುರಿ); ಸಾಧ್ವಿ ದುರಿ (ಪುಣೆ)–2, ಆರತಿ ಪಾಟೀಲ್ (ಮುಂಬೈ)–3; 50 ಮೀ ಬ್ಯಾಕ್‌ಸ್ಟ್ರೋಕ್: ಶೃಂಗಿ ಬಾಂದೇಕರ್ (ಜೈನ್)–1. ಕಾಲ: 32.01 (ಕೂಟ ದಾಖಲೆ. ಹಳೆಯದು: 32.95, ದಾಮಿನಿ ಗೌಡ);ಪ್ರತ್ಯಾಸ ರಾಯ್ (ಜಾಧವಪುರ್)–2, ದಾಮಿನಿ ಗೌಡ (ರಾಜೀವಗಾಂಧಿ)–3; 100 ಮೀ ಬ್ರೆಸ್ಟ್‌ಸ್ಟ್ರೋಕ್: ಜ್ಯೋತಿ ಪಾಟೀಲ್ (ಮುಂಬೈ)–1. ಕಾಲ: 1:17.17 (ಕೂಟ ದಾಖಲೆ. ಹಳೆಯದು: 1:18.12, ಜ್ಯೋತಿ ಪಾಟೀಲ್), ಆರತಿ ಪಾಟೀಲ್ (ಮುಂಬೈ)–2 ಕಲ್ಯಾಣಿ ಸಕ್ಸೇನ (ಗುಜರಾತ್)–3; 200 ಮೀ ವೈಯಕ್ತಿಕ ಮೆಡ್ಲೆ: ಶೃಂಗಿ ಬಾಂದೇಕರ್ (ಜೈನ್)–1. ಕಾಲ: 2:32.98 (ಕೂಟ ದಾಖಲೆ. ಹಳೆಯದು: 2:34.50, ಸಾಧ್ವಿ ದುರಿ), ಕಲ್ಯಾಣಿ ಸಕ್ಸೇನ (ಗುಜರಾತ್)–2, ಸೃಷ್ಟಿ ಉಪಾಧ್ಯಾಯ (ಜಾಧವಪುರ್)–3; 4x100 ಮೀ ಫ್ರೀಸ್ಟೈಲ್: ಜಾಧವಪುರ್–1, ಮದ್ರಾಸ್–2, ಜೈನ್–3.
ಬಾಕ್ಸಿಂಗ್: ಮಹಿಳೆಯರ 45-48ಕೆಜಿ ಫೈನಲ್: ಶೋಭಾ ಕೋಳಿಗೆ (ಸೋಬನ್ ಸಿಂಗ್) ಶಿಲ್ಪಾ (ಗೊರಕ್‌ಪುರ) ವಿರುದ್ಧ 5-0ಯಿಂದ ಜಯ; ಕಂಚು: ಸುನೈನಾ (ಭಗತ್ ಸಿಂಗ್), ಸೋಮವತಿ (ಚಂಡೀಗಢ); 48-50 ಕೆಜಿ ಫೈನಲ್: ಪೂಜಾಗೆ (ರಣಬೀರ್ ಸಿಂಗ್) ರಿಂಕಿ ಕಿಶೋರ್ (ಬುಂದೇಲ್‌ಖಂಡ್) ವಿರುದ್ಧ 5-0ರಲ್ಲಿ ಜಯ; ಕಂಚು: ಸಂಜೀತಾ (ಮಹರ್ಷಿ ದಯಾನಂದ್), ಆರತಿ (ಭಗತ್ ಸಿಂಗ್); 50-52 ಕೆಜಿ ಫೈನಲ್: ರೇಣುಗೆ (ಮೀರ್‌ಪುರ್) ದಿಯಾ ಬಾಚೆ (ಅಮರಾವತಿ) ವಿರುದ್ಧ 3-2ರಲ್ಲಿ ಜಯ; ಕಂಚು: ನಿಶಾ ರಾಣಿ (ದೇವಿಲಾಲ್), ನಿಕಿತಾ (ಕುರುಕ್ಷೇತ್ರ); 52-54 ಕೆಜಿ ಫೈನಲ್: ಸಂದೀಪ್ ಕೌರ್‌ಗೆ (ಚಂಡೀಗಢ) ಶಿವಾನಿ (ದೀನ್ ದಯಾಳ್) ವಿರದ್ಧು 4-1ರಲ್ಲಿ ಜಯ; ಕಂಚು: ಚೇತನಾ (ಪೂರ್ವಾಂಚಲ್), ಗಾಯತ್ರಿ (ಸೋಬನ್ ಸಿಂಗ್); 54-57 ಕೆಜಿ ಫೈನಲ್: ಪೂನಂಗೆ (ಕುರುಕ್ಷೇತ್ರ) ಕೀರ್ತಿ (ಭಗತ್ ಸಿಂಗ್) ವಿರುದ್ಧ 3-1ರಲ್ಲಿ ಜಯ; ಕಂಚು: ನಿಕಿತಾ (ದೀನ್ ದಯಾಳ್); 57-60 ಕೆಜಿ ಫೈನಲ್: ಮುಸ್ಕಾನ್‌ಗೆ (ದೀನ್ ದಯಾಳ್) ರೇಖಾ (ಇಂದಿರಾಗಾಂಧಿ) ವಿರುದ್ಧ 5-0ಯಿಂದ ಜಯ; ಕಂಚು: ವಿಂಕಾ (ಕುರುಕ್ಷೇತ್ರ), ನೇಹಾ (ಮಹಾರಾಜ); 60-63 ಕೆಜಿ ಫೈನಲ್: ದೀಪಿಕಾ ಶರ್ಮಾಗೆ (ರಣಬೀರ್ ಸಿಂಗ್) ರಾಜಬಾಲ (ರವಿಶಂಕರ್ ಶುಕ್ಲಾ) ವಿರುದ್ಧ 4-1ರಲ್ಲಿ ಜಯ; ಕಂಚು: ಪ್ರಿಯಾಂಕ (ಪಂಜಾಬ್), ಸಯಾಲಿ (ಪುಣೆ); 63-66 ಕೆಜಿ ಫೈನಲ್: ಆಶ್ತಾ ಪಹ್ವಾಗೆ (ಚರಣ್ ಸಿಂಗ್) ಸಿವಿ (ಕುರುಕ್ಷೇತ್ರ) ವಿರುದ್ಧ 4-1ರಲ್ಲಿ ಜಯ; ಕಂಚು: ಅಂಜು ದೇಸ್ವಾಲ್ (ಪಂಜಾಬ್), ನೇಹಾ (ಸೋಬನ್ ಸಿಂಗ್); 66-70 ಕೆಜಿ ಫೈನಲ್: ಕಿರಣ್‌ಗೆ (ಕುಶಾಲ್ ದಾಸ್) ಕುಸುಮ್ (ಗುರು ಜಂಬೇಶ್ವರ್) ವಿರುದ್ಧ 5-0ರಲ್ಲಿ ಜಯ; ಕಂಚು: ಲಾಶು ಯಾದವ್ (ಕುರುಕ್ಷೇತ್ರ), ಕೋಮಲ್ ಪ್ರೀತ್ (ಚಂಡೀಗಢ); 70-75 ಕೆಜಿ ಫೈನಲ್: ಶ್ವೇತಿಮಾಗೆ (ಹಿಮಾಚಲ್ ಪ್ರದೇಶ) ದೀಪಿಕಾ (ರಣಬೀರ್ ಸಿಂಗ್) ವಿರುದ್ಧ 3-2ರಲ್ಲಿ ಜಯ; ಕಂಚು: ಖುಷಿ (ಚಂಡೀಗಢ), ತಮನ್ನ (ಕುರುಕ್ಷೇತ್ರ); 75-81ಕೆಜಿ ಫೈನಲ್: ಕೋಮಲ್‌ಗೆ (ಪಂಜಾಬ್) ನೇಹಾ (ನಿರ್ವಾಣ್) ಎದುರು 5-0ರಲ್ಲಿ ಗೆಲುವು; ಕಂಚು: ಚಂದನ್ (ಲವ್ಲಿ), ಮನ್‌ಪ್ರೀತ್ (ಕುರುಕ್ಷೇತ್ರ); 81-81+ ಕೆಜಿ ಫೈನಲ್: ನೇಹಾಗೆ (ಪಂಜಾಬಿ) ದೀಪಿಕಾ (ಬನ್ಸಿ ಲಾಲ್) ವಿರುದ್ದ 5-0ರಲ್ಲಿ ಜಯ; ಕಂಚು: ಪಲ್ವಿಂದರ್ ಕೌರ್ (ಬೂಪಿಂದರ್ ಸಿಂಗ್), ಮೆಹಕ್ ಮೊರ್ (ಪಂಜಾಬ್). ಪುರುಷರ 46-48 ಕೆಜಿ ಫೈನಲ್: ಗೋಪಿಗೆ (ಲವ್ಲಿ) ಕೃಷ್ಣ (ದೀನ್ ದಯಾಳ್) ವಿರುದ್ಧ
ಜಯ 3-2; ಕಂಚು: ನೀರಜ್ (ಕುರುಕ್ಷೇತ್ರ), ಗಗನ್‌ದೀಪ್ (ಪಂಜಾಬಿ); 48-51 ಕೆಜಿ ಫೈನಲ್: ಸ್ಪರ್ಶ್ ಕುಮಾರ್‌ಗೆ (ಚಂಡೀಗಢ) ವಿವೇಕ್ (ಕುರುಕ್ಷೇತ್ರ) ವಿರುದ್ಧ 4-1ರಲ್ಲಿ ಜಯ; ಕಂಚು: ಅಂಕಿತ್ (ಮಹರ್ಷಿ ದಯಾನಂದ), ಅಮರ್‌ಜೀತ್ (ಗುರುನಾನಕ್).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.